

ಉಜ್ಜಯಿನಿ: ತಮ್ಮ ಮುಂದಿನ 'ಝಾರ ಹಠ್ಕೆ ಝಾರ ಬಜ್ಕೆ'(Zara Hatke Zara Bacchke) ಚಿತ್ರ ಯಶಸ್ವಿಯಾಗಲಿ ಎಂದು ನಟಿ ಸಾರಾ ಅಲಿ ಖಾನ್(Sara Ali Khan) ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಧ್ಯಪ್ರದೇಶದ(Madhya Pradesh) ಇಂದೋರ್, ಉಜ್ಜಯಿನಿಯಲ್ಲಿರುವ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಟಿ ಸಾರಾ ಅಲಿ ಖಾನ್, ಗುಲಾಬಿ ಬಣ್ಣದ ಉಡುಗೆ ತೊಟ್ಟು ಭಕ್ತಿಯಿಂದ ದೇವರಿಗೆ ಕೈಮುಗಿದು ಚಿತ್ರ ಯಶಸ್ಸಿನತ್ತ ಸಾಗಲಿ ಎಂದು ನಮಿಸಿದ್ದಾರೆ.
ದೇವಾಲಯದ ಆವರಣದಲ್ಲಿ ಆರಂಭಿಸಿದ ಭಜನೆಯಲ್ಲಿ ಪಾಲ್ಗೊಂಡಿದ್ದ ನಟಿಯನ್ನು ಅಲ್ಲೇ ಇದ್ದ ಅಭಿಮಾನಿಯೊಬ್ಬರು ಮಾತನಾಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಾ, ಹೇಗಿದ್ದೀರಾ ಎಂದು ಕೇಳಿ, ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಒಂದು ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗುತ್ತಿದ್ದು, ಸಿನಿಮಾ ಗೆಲುವನ್ನು ಕಾಣಲಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. 'ಝಾರ ಹಠ್ಕೆ ಝಾರ ಬಜ್ಕೆ' ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ನಟಿ ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.