ನ.1 ಟ್ರೆಂಡಿಂಗ್​ನಲ್ಲಿ ಜಾನು

janu jan10 2020
Published on

2018ರ ಅಕ್ಟೋಬರ್​ನಲ್ಲಿ ತೆರಕಂಡಿದ್ದ ನಟ ವಿಜಯ್ ಸೇತುಪತಿ, ನಟಿ ತ್ರಿಶಾ ಮುಖ್ಯಭೂಮಿಕೆಯ ತಮಿಳಿನ ‘96’ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಉತ್ತಮ ಹೆಸರು ಕೂಡ ಮಾಡಿತ್ತು. ಇದೀಗ ಈ ಚಿತ್ರ ‘ಜಾನು’ ಟೈಟಲ್ ಮೂಲಕ ತೆಲುಗಿಗೆ ರೀಮೇಕ್ ಆಗಿದ್ದು, ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. 1 ನಿಮಿಷ 25 ಸೆಕೆಂಡ್ ಇರುವ ‘ಜಾನು’ ಚಿತ್ರದ ಟೀಸರ್ ಸದ್ಯ ಯುಟ್ಯೂಬ್​ನಲ್ಲಿ ನಂ.1 ಟ್ರೆಂಡಿಂಗ್​ನಲ್ಲಿದ್ದು, ಕ್ರೇಜ್ ಸೃಷ್ಟಿಸಿದೆ.

‘96’ ಚಿತ್ರ ನಿರ್ದೇಶಿಸಿದ್ದ ಸಿ.ಪ್ರೇಮ್ ಕುಮಾರ್ ಅವರೇ ತೆಲುಗಿನ ‘ಜಾನು’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ನಟ ಶರ್ವಾನಂದ-ಸಮಂತಾ ಅಕ್ಕಿನೇನಿ ಚಿತ್ರದಲ್ಲಿ ಜೋಡಿಯಾಗಿದ್ದಾರೆ.

ತಮಿಳಿನ ‘96’ ಚಿತ್ರವನ್ನು ‘99’ ಶೀರ್ಷಿಕೆ ಮೂಲಕ ಕನ್ನಡಕ್ಕೂ ರಿಮೇಕ್ ಮಾಡಲಾಗಿತ್ತು. ಪ್ರೀತಂ ಗುಬ್ಬಿ ಅತ್ಯುತ್ತಮ ನಿರ್ದೇಶನ, ನಟ ಗೋಲ್ಡನ್ ಸ್ಟಾರ್ ಗಣೇಶ್, ಬಹುಭಾಷಾ ನಟಿ ಭಾವನಾ ಜೋಡಿಯ ಮೋಡಿಯಿಂದ ವಿಭಿನ್ನ ಕಥಾಹಂದರದ ಈ ಚಿತ್ರ ಇಲ್ಲಿಯೂ ಸಕ್ಷಸ್ ಕಂಡಿತ್ತು.

ಶಾಲಾ ದಿನಗಳ ಜೀವನ, ಮೊದಲ ಪ್ರೀತಿ, ಅದನ್ನು ಹೇಳಿಕೊಳ್ಳದ ರೀತಿ, ಮುಂದೊಂದು ದಿನ ಪರಸ್ಪರ ಭೇಟಿ, ಹಳೇ ನೆನಪುಗಳ ಮೆಲುಕು ಇವೆಲ್ಲದರ ಸಮ್ಮಿಶ್ರಣವೇ ಈ ಸಿನಿಮಾದ ಕಥೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net