'ಯುವರತ್ನ' ನಿಗೂ ಕಾಡಿದ ಕೊರೊನಾ ಭಯ; ಯುರೋಪ್​​ನಲ್ಲಿ ನಡೆಯಬೇಕಿದ್ದ ಶೂಟಿಂಗ್​ ಕ್ಯಾನ್ಸಲ್ ಮಾಡಿಕೊಂಡ ಪುನೀತ್​ ಆ್ಯಂಡ್​ ಟೀಂ

Yuvaratna 3 March20
Published on

ಬೆಂಗಳೂರು: ಪವರ್​ಸ್ಟಾರ್​ ಪುನೀತ್​ ರಾಜಕುಮಾರ್​ ಅಭಿನಯದ ಯುವರತ್ನ ಸಿನಿಮಾಕ್ಕೂ ಕೊರೊನಾ ಎಫೆಕ್ಟ್​ ತಗುಲಿದೆ. ಚಿತ್ರೀಕರಣಕ್ಕೆಂದು ಯುರೋಪ್​ಗೆ ಹೋಗಬೇಕಿದ್ದ ಚಿತ್ರತಂಡ ಪ್ರಯಾಣವನ್ನು ಕ್ಯಾನ್ಸಲ್​ ಮಾಡಿಕೊಂಡಿದೆ.

ಈಗಾಗಲೇ ಕೊರೊನಾದಿಂದ ಜಾಗತಿಕ ಮಾರುಕಟ್ಟೆಯವೆಗೂ ಕುಸಿತಕಂಡಿದೆ. ವ್ಯಾಪಾರ, ವಹಿವಾಟುಗಳ ಮೇಲೆಯೂ ಋಣಾತ್ಮಕ ಪ್ರಭಾವ ಬೀರಿದೆ. ಇದೀಗ ಸ್ಯಾಂಡಲ್​ವುಡ್​ಗೂ ಕೊರೊನಾ ಭಯ ಕಾಡುತ್ತಿದೆ.

ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಯುರೋಪ್​ನ ಸ್ಲೋವೇನಿಯಾಗೆ ಹೋಗಲು ಪ್ಲ್ಯಾನ್​ ಹಾಕಿಕೊಳ್ಳಲಾಗಿತ್ತು. ಮಾರ್ಚ್​ 7 ರವರೆಗೆ ಅಲ್ಲಿ ಶೂಟಿಂಗ್​ ನಡೆಯುವುದಿತ್ತು. ಈಗಾಗಲೇ ಟಿಕೆಟ್​, ಹೋಟೆಲ್​ ಎಲ್ಲವೂ ಬುಕ್​ ಆಗಿತ್ತು. ಆದರೆ ಈಗ 15-20 ಲಕ್ಷ ರೂಪಾಯಿ ನಷ್ಟವಾದರೂ ಪರವಾಗಿಲ್ಲ, ಹೋಗುವುದು ಬೇಡವೆಂದು ಚಿತ್ರತಂಡ ನಿರ್ಧರಿಸಿದೆ.

ಯುವರತ್ನ ಸಿನಿಮಾವನ್ನು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net