ಯುವ ಗರ್ಜನೆ: ದೊಡ್ಡಪ್ಪ-ಚಿಕ್ಕಪ್ಪನಿಂದ ಟ್ರೇಲರ್ ಲಾಂಚ್...

Puneet
Published on

ಬೆಂಗಳೂರು: ಡಾ. ರಾಜಕುಮಾರ್ ಜನ್ಮದಿನದ ಪ್ರಯುಕ್ತ ಏ. 24ರಂದು ಅವರ ಮೊಮ್ಮಗ ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರದ ಲುಕ್ ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಆ ಸಿನಿಮಾ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಇಡೀ ತಂಡ ಹೊಸ ಸುದ್ದಿಯೊಂದಿಗೆ ಹಾಜರಾಗಿದೆ. ಇನ್ನೇನು ಶೀಘ್ರದಲ್ಲಿ ಯುವ ಅವರ ಇಂಟ್ರೊಡಕ್ಷನ್ ಟ್ರೇಲರ್ ಬಿಡುಗಡೆ ಆಗಲಿದೆ.

ಚಿತ್ರದಲ್ಲಿ ಯುವ ಹೇಗೆ ಕಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಲಾಕ್​ಡೌನ್​ಗೂ ಮುನ್ನವೇ ಈ ಟ್ರೇಲರ್​ಗೆ ಬೇಕಾದ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಒಟ್ಟು ಐದು ನಿಮಿಷದ ಈ ವಿಡಿಯೋದಲ್ಲಿ ಖಡಕ್ ಡೈಲಾಗ್​ಗಳ ಜತೆಗೆ ಭರ್ಜರಿ ಆಕ್ಷನ್ ಸನ್ನಿವೇಶಗಳೂ ಇರಲಿದೆ ಎಂದು ತಂಡ ತಿಳಿಸಿದೆ. ಇದನ್ನೂ ಓದಿ:ಸಿಸಿಬಿ ಅಧಿಕಾರಿಗಳ ಎದುರು ಎಲ್ಲವನ್ನೂ ಒಪ್ಪಿಕೊಂಡ ದಿಗಂತ್​-ಐಂದ್ರಿತಾ ರೈ

ಸದ್ಯ ಹಾಗೆ ಸಿದ್ಧವಾದ ಆ ಟ್ರೇಲರ್​ನ್ನು ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ವೀಕ್ಷಿಸಿದ್ದು, ತಂಡದ ಬೆನ್ನು ತಟ್ಟಿದ್ದಾರೆ. ಇತ್ತ ಚಿತ್ರಮಂದಿರವೊಂದರಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿ, ದೊಡ್ಡ ಪರದೆಯ ಮೇಲೆಯೇ ಟ್ರೇಲರ್ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡದ್ದು. ಸದ್ಯ ಆ ಪ್ರಕ್ರಿಯೆ ನಡೆದಿದ್ದು, ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾದ ಮೇಲೆ ಟ್ರೇಲರ್ ಬಿಡುಗಡೆಯಾಗಲಿದೆ.

ಸದ್ಯ ನಿರ್ದೇಶಕ ಪುನೀತ್ ರುದ್ರನಾಗ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು, 2021ರ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಶೂಟಿಂಗ್ ಶುರು ಮಾಡುವ ಪ್ಲ್ಯಾನ್​ ಹಾಕಿದ್ದಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಚಿತ್ರದಲ್ಲಿ, ಯುವ ರಾಜಕುಮಾರ್ ಯೋಧನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕಾಗಿ ವಿಶೇಷ ಸೆಟ್​ಗಳನ್ನು ನಿರ್ವಿುಸುವ ಯೋಚನೆಯಲ್ಲಿ ಚಿತ್ರತಂಡ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net