ನುಡಿಯ ಸೇವಕನಾಗಿ ನಿಮ್ಮ ಹೃದಯದಲ್ಲಿ ಬದುಕಲು ಶ್ರಮಿಸುತ್ತೇನೆ ... ಯುವ ರಾಜಕುಮಾರ್ ಹೀಗೆ ಹೇಳಿದ್ದು ಯಾಕೆ ಗೊತ್ತಾ?

Yuva Final
Published on

ಡಾ. ರಾಜಕುಮಾರ್ ಮೊಮ್ಮಗ ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರದ ಪೋಸ್ಟರ್ ಏಪ್ರಿಲ್ 24ಕ್ಕೆ ಬಿಡುಗಡೆಯಾಗಿದೆ. ಆ ನಂತರ ಯುವಗೆ ಬರೀ ಕನ್ನಡ ಚಿತ್ರರಂಗದಿಂದಷ್ಟೇ ಅಲ್ಲ, ಕನ್ನಡ ಚಿತ್ರ ಅಭಿಮಾನಿಗಳಿಂದಲೂ ಮೆಚ್ಚುಗೆ ಮತ್ತು ಸ್ವಾಗತ ಸಿಕ್ಕಿದೆ. ಇದೆಲ್ಲದರಿಂದ ಖುಷಿಯಾಗಿರುವ ಯುವ, ತಮ್ಮನ್ನು ಪ್ರೋತ್ಸಾಹಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯುವ, ‘ನೀವು ನನ್ನ ಮೇಲೆ ಸುರಿಸಿದ ಪ್ರೀತಿ ಮತ್ತು ಆಶೀರ್ವಾದಗಳ ಸುರಿಮಳೆಗೆ ಧನ್ಯವಾದಗಳು ಸಾಕಾಗುವುದಿಲ್ಲ. ಜೀವನದುದ್ದಕ್ಕೂ ನುಡಿಯ ಸೇವಕನಾಗಿ ನಿಮ್ಮ ಹೃದಯದಲ್ಲಿ ಬದುಕಲು ಶ್ರಮಿಸುತ್ತೇನೆ’ ಎಂದು ತಮ್ಮ ಟ್ವೀಟ್ ಮೂಲಕ ಯುವ ಧನ್ಯವಾದ ತಿಳಿಸಿದ್ದಾರೆ.

ಅಂದಹಾಗೆ, ಯುವ ಅಭಿನಯದ ‘ವೈಆರ್ 01’, ‘ಲಾಕ್‌ಡೌನ್ ಮುಗಿದ ಮೇಲೆ ಶುರುವಾಗಲಿದೆ. ಈ ಚಿತ್ರವನ್ನು ಪುನೀತ್ ರುದ್ರನಾಗ್ ಎನ್ನುವವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ ಎಂಬುದು ಗೊತ್ತಾಗಿಲ್ಲ. ಡಾ. ರಾಜಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ಈ ಚಿತ್ರ ನಿರ್ಮಿಸುತ್ತದೋ ಅಥವಾ ಬೇರೆ ನಿರ್ಮಾಪಕರು ಮುಂದೆ ಬರುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net