ನಟ ಸಿದ್ಧಾರ್ಥ್ ಬದುಕಿಲ್ಲ!? ಯೂಟ್ಯೂಬ್ ವಿಡಿಯೋ ನೋಡಿ ಶಾಕ್ ಆದ ಹೀರೋ!

sid
Published on

ಚೆನ್ನೈ: ತಮಿಳಿನ ನಟ ಸಿದ್ಧಾರ್ಥ್ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆಯಲ್ಲವೇ? ತಮಿಳು ಚಿತ್ರರಂಗದಲ್ಲಿ ಬೇಡಿಕೆಯಿರುವ ನಟ ಅವರು. ಆದರೆ ವಿಚಿತ್ರವೆಂದರೆ ಯೂಟ್ಯೂಬ್ ವಿಡಿಯೋವೊಂದರಲ್ಲಿ ಮಧ್ಯ ವಯಸ್ಸಿನಲ್ಲಿ ಸಾವನ್ನಪ್ಪಿದ ನಟ ನಟಿಯರ ಸಾಲಿನಲ್ಲಿ ಸಿದ್ಧಾರ್ಥ್​ನನ್ನು ಸೇರಿಸಲಾಗಿದೆ.

ಹೌದು. ದಕ್ಷಿಣ ಭಾರತದಲ್ಲಿ ಯುವಕರಾಗಿದ್ದಲೇ ಸಾವನ್ನಪ್ಪಿದ 10 ನಟ ನಟಿಯರು ಎನ್ನುವ ಶೀರ್ಷಿಕೆ ಇರುವ ವಿಡಿಯೋ ಒಂದರಲ್ಲಿ ಸಿದ್ಧಾರ್ಥ್ ಹೆಸರನ್ನೂ ಸೇರಿಸಲಾಗಿದೆ. ಸಿದ್ಧಾರ್ಥ್ ಜತೆ ನಟಿಯರಾದ ಸೌಂದರ್ಯ ಮತ್ತು ಆರತಿ ಅಗರ್ವಾಲ್ ಇರುವ ಫೋಟೋವಬನ್ನು ವಿಡಿಯೋದ ಫೀಚರ್ಡ್ ಇಮೇಜ್ ಮಾಡಲಾಗಿದೆ. ವಿಡಿಯೋದ ಒಳಗೆ ಸಿದ್ಧಾರ್ಥ್ ಬಗ್ಗೆ ಮಾಹಿತಿಯಿಲ್ಲ ಆದರೂ ಅದರ ಇಮೇಜ್​ನಲ್ಲಿ ಅವರ ಫೋಟೋ ಬಳಸಲಾಗಿದೆ. ಅಂದ ಹಾಗೆ ಈ ವಿಡಿಯೋ ಪೋಸ್ಟ್ ಆಗಿ ಬರೋಬ್ಬರಿ 3 ವರ್ಷ ಆಗಿದೆ.

ಈ ವಿಡಿಯೋದ ತುಣುಕನ್ನು ಅಭಿಮಾನಿಯೊಬ್ಬರು ಸಿದ್ಧಾರ್ಥ್​ಗೆ ಕಳಿಸಿದ್ದರಂತೆ. ಅದನ್ನು ಕಂಡು ಗಾಬರಿಗೊಂಡ ಸಿದ್ಧಾರ್ಥ್ ಯೂಟ್ಯೂಬ್​ಗೆ ವಿಡಿಯೋ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಆದರೆ ಯೂಟ್ಯೂಬ್, ಈ ವಿಡಿಯೋದಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಸಿದ್ಧಾರ್ಥ್​ಗೆ ರಿಪ್ಲೇ ಮಾಡಿದೆಯಂತೆ. ಈ ವಿಚಾರವನ್ನು ಸ್ವತಃ ಸಿದ್ಧಾರ್ಥ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net