PHOTOS| ಈ ಇಬ್ಬರು ಸುಂದರಿಯರು ಸಹೋದರಿಯರೆಂದು ಭಾವಿಸಿದ್ರೆ ನಿಮ್ಮ ಊಹೆ ತಪ್ಪು: ನಿಜ ತಿಳಿದರೆ ಶಾಕ್​ ಗ್ಯಾರೆಂಟಿ!

Mother Daughter
Published on

ತೈಪೆ: ನೋಡಲು ಸಹೋದರಿಯರಂತೆ ಕಾಣುವ ತೈವಾನ್​ ದೇಶದ ಇಬ್ಬರು ಸುಂದರಿಯರು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ, ಈ ಇಬ್ಬರು ಕೂಡ ಸಹೋದರಿಯರಲ್ಲ, ಬದಲಾಗಿ ಅಮ್ಮ-ಮಗಳೆಂಬುದು ನೆಟ್ಟಿಗರನ್ನು ಒಂದು ಕ್ಷಣ ಹುಬ್ಬೇರಿಸುವುದಂತೂ ಸತ್ಯ.

ಐಮೀ ಸನ್​ ಯುನ್​ಯುನ್ ಎಂಬಾಕೆಗೆ 41ರ ಹರೆಯ. ಈಕೆಯ ಮಗಳು ಟ್ರಿನಿಟಿ ಲಿಯೋಗೆ ಕೇವಲ 20 ವರ್ಷ ಮಾತ್ರ. ಅಮ್ಮ ಮತ್ತು ಮಗಳಿನ ನಡುವೆ 21 ವರ್ಷ ವಯಸ್ಸಿನ ಅಂತರವಿದೆ. ಆದೆ, ನೋಡಲು ಸಹೋದರಿಯರಂತೆ ಕಾಣುವ ಅಮ್ಮ-ಮಗಳ ಜೋಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ, ಇವರು ಸೋಶಿಯಲ್​ ಮೀಡಿಯಾ ಸ್ಟಾರ್​ ಕೂಡ ಆಗಿದ್ದಾರೆ.

ಪ್ರತಿನಿತ್ಯ ಚಾಚೂ ತಪ್ಪದೇ ಪಾಲಿಸುವ ಚರ್ಮ ಪೋಷಣೆ, ತರಕಾರಿ ಮತ್ತು ಸೇಬು ಜ್ಯೂಸ್​ ಮೇಲಿನ ಅತೀವ ಪ್ರೀತಿ ಐಮೀ ಸನ್​ ಯುನ್​ಯುನ್ ಅವರ ಚಿರ ಯೌವ್ವನದ ಗುಟ್ಟಾಗಿದೆ.

ಐಮೀ ಸನ್​ ಯುನ್​ಯುನ್ ಅವರು 1978ರಲ್ಲಿ ತೈಪೆಯಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಏಷ್ಯಾದ ಆರಂಭಿಕ ಮೊಬೈಲ್ ನೆಟ್​ವರ್ಕ್​, ತೈವಾನ್​ ಮೊಬೈಲ್​ನ ಸಂಸ್ಥಾಪಕರಾಗಿದ್ದಾರೆ. ತಾಯಿ ಇನ್ವೆಸ್ಟ್​ಮೆಂಟ್​ ಬ್ಯಾಂಕ್​ ಯುಂತಾ ಸೆಕ್ಯುರಿಟೀಸ್​ನ ಡೆಪ್ಯುಟಿ ಚೇರ್ಮನ್​ ಆಗಿದ್ದಾರೆ.

ಐಮೀ ಸನ್​ ಯುನ್​ಯುನ್ ಪತಿ ಹೆನ್ರಿ ಲಿಯಾ ತೈಪೆಯಲ್ಲಿ ಯಶಸ್ವಿ ಉದ್ಯಮಿಯಾಗಿದ್ದು, ಯುನ್​ಗಿಂತ ಏಳು ವರ್ಷ ಹಿರಿಯರು. ಯುನ್​ 21ನೇ ವಯಸ್ಸಿನಲ್ಲಿ ಮದುವೆಯಾದರು. ದಂಪತಿಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ. ಯುನ್​ ತೈಪೆ ಮೂಲದ ರೀಟೈಲ್​ ಗ್ರೂಪ್​ನ ಫ್ಯಾಶನ್​ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ತನ್ನ ಸ್ವಂತ ಜ್ಯುವೆಲರಿ ಬ್ರ್ಯಾಂಡ್​ನ ಸಹಸಂಸ್ಥಾಪಕಿಯು ಆಗಿದ್ದಾರೆ.

ಈವರೆಗೂ ಮಾಧ್ಯಮಗಳ ಕಣ್ಣಿಗೆ ಬೀಳದ ಯುನ್​, ಇತ್ತೀಚೆಗೆ ತಮ್ಮ ಮಗಳು ಟ್ರಿನಿಟಿ ಡಿಯೋ ಜತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್​ಲೋಡ್ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಕಳೆದ ವರ್ಷದ ಅಂತಿಮದಲ್ಲಿ ಡಿನ್ನರ್​ ಪಾರ್ಟಿಯೊಂದರಲ್ಲಿ ತೆಗೆದಿದ್ದ ಫೋಟೋವನ್ನು ಮಗಳು ತನ್ನ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿಕೊಂಡು ಹೆಮ್ಮೆಯ ತಾಯಿ ಎಂದು ಬರೆದುಕೊಂಡಿದ್ದಳು. ಇದು ನೆಟ್ಟಿಗರ ಕಣ್ಣಿಗೆ ಬಿದ್ದು ಅಂದಿನಿಂದ ಸೋಶಿಯಲ್​​ ಮೀಡಿಯಾ ಸ್ಟಾರ್​ ಆಗಿದ್ದಾರೆ.

ಅಮ್ಮ ಮತ್ತು ಮಗಳು ಇಬ್ಬರು ಇನ್​ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು ಸಾಕಷ್ಟು ಫೋಟೋಗಳನ್ನು ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಯುನ್​ ಅವರ ಹಾಟ್​ ಫೋಟೋಗಳು ಕೂಡ ಇದೆ. ಅಮ್ಮ-ಮಗಳ ಜತೆಯಾದ ಫೋಟೋವನ್ನು ಯಾರಿಗಾದರೂ ತೋರಿಸಿದರೆ ಯಾರು ನಂಬುವುದಿಲ್ಲ. ತನ್ನ ಚರ್ಮ ರಕ್ಷಣೆಗೆ ಹೆಚ್ಚಾಗಿ ಮಾಶ್ಚರೈಸರ್​ ಬಳುಸುವುದಾಗಿ ಹೇಳಿಕೊಂಡಿದ್ದಾರೆ. ಏನೇ ಆಗಲಿ 40ರ ಹರೆಯಲ್ಲೂ 20ರ ಯುವತಿಯಂತೆ ಕಾಣುವ ಯುನ್​​​ ಸಾಕಷ್ಟು ಮಂದಿಗೆ ಪ್ರೇರಣೆಯು ಆಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net