ಚಿನ್ನದ ಪದಕ ಗೆದ್ದ ವೈದ್ಯ, ಯುಕೆಯಲ್ಲಿ ಪೈಲಟ್​! 'ತಾರೆ ಜಮೀನ್ ಪರ್' ಚಿತ್ರದ ಯೊಹನ್​ ಈಗ ಹೇಗಿದ್ದಾನೆ ನೋಡಿ

ತಾರೆ ಜಮೀನ್ ಪರ್ ಚಿತ್ರದ ಬಾಲನಟ ಸಚೇತ್​ ಇಂಜಿನಿಯರ್​
ತಾರೆ ಜಮೀನ್ ಪರ್ ಚಿತ್ರದ ಬಾಲನಟ ಸಚೇತ್​ ಇಂಜಿನಿಯರ್​
Published on

ಪ್ರಮುಖ ಮುಖ್ಯಾಂಶಗಳು

  • 2007ರಲ್ಲಿ ತೆರೆಕಂಡ ಅಮೀರ್​ ಖಾನ್​ ನಿರ್ದೇಶಿಸಿದ 'ತಾರೆ ಜಮೀರ್ ಪರ'
  • ಇಂದಿಗೂ ಈ ಚಿತ್ರದ ದೃಶ್ಯ, ಪಾತ್ರಗಳು ಸಿನಿಪ್ರಿಯರಿಗೆ ಚೆನ್ನಾಗಿ ನೆನಪಿದೆ
  • ಈ ಚಿತ್ರದಲ್ಲಿ ಪೆದ್ದು ಹುಡುಗನ ಅಣ್ಣನ ಪಾತ್ರದಲ್ಲಿ ನಟಿಸಿದ್ದ ಯೊಹನ್​ ಈಗ ಹೇಗಿದ್ದಾನೆ ಗೊತ್ತಾ?
ಮುಂಬೈ: 2007ರಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್​ ಹಿಟ್​ ಆದ ಅಮೀರ್ ಖಾನ್ ಅಭಿನಯದ ತಾರೆ ಜಮೀನ್​ ಪರ್​ ಚಿತ್ರ ಯಾರಿಗೆ ನೆನಪಿಲ್ಲ ಹೇಳಿ? 90ರ ದಶಕದ ಅನೇಕರು ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಕಣ್ಣೀರಿಟ್ಟ ಪ್ರಸಂಗಗಳು ಈಗಲೂ ನೆನಪಿನಲ್ಲಿ ಅಚ್ಚಳಿಯದಂತಿದೆ.
ಸ್ವತಃ ಅಮೀರ್ ಅವರೇ ನಿರ್ದೇಶಿಸಿ, ನಟಿಸಿದ ಈ ಸಿಂಪಲ್​ ಕಥೆಯ ಸಿನಿಮಾ ಕೇವಲ ಬಾಲಿವುಡ್​ ಮಾತ್ರವಲ್ಲ, ಇತರೆ ಚಿತ್ರೋದ್ಯಮದ ಸಿನಿಪ್ರೇಮಿಗಳ ಗಮನವನ್ನು ಸೆಳೆದಿತ್ತು. ಆ ಮಟ್ಟಿಗೆ ಯಶಸ್ಸನ್ನು ಗಳಿಸಿತು. ಮುಖ್ಯವಾಗಿ, ಚಿತ್ರದಲ್ಲಿ ಹುಬ್ಬಲ್ಲಿನ ಪೆದ್ದು ಹುಡುಗನೊಬ್ಬನ ನಟನೆಯೇ ಚಿತ್ರದ ಸಕ್ಸಸ್​ಗೆ ಬಹುದೊಡ್ಡ ಕಾರಣ. ಆತನ ಅಳು, ಓದಿಗಾಗಿ ಒದ್ದಾಟ, ಪೋಷಕರಿಂದ ದೂರ ನೋಡುಗರ ಕಣ್ಣುಗಳಲ್ಲಿ ನೀರು ತುಂಬುವಂತೆ ಮಾಡಿತು. ಅಷ್ಟು ಅಮೋಘ ಅಭಿನಯ ಮಾಡಿದ ಈ ಹುಡುಗ ಬಾಲಿವುಡ್​ನಲ್ಲಿ ಇಂದಿಗೂ ಅವಕಾಶಗಳನ್ನು ಪಡೆಯಲು ಒದ್ದಾಡುತ್ತಿದ್ದಾರೆ. ಆದ್ರೆ, ಇದೇ ಚಿತ್ರದಲ್ಲಿ ಅವರ ಅಣ್ಣನ ಪಾತ್ರದಲ್ಲಿ ನಟಿಸಿದ ಯೊಹಾನ್​ ಆವಸ್ತಿ ಸದ್ಯ ಚಿತ್ರರಂಗ ತೊರೆದು, ನಿಮ್ಮ ಊಹೆಗೂ ಮೀರಿದ ಸಾಧನೆಯನ್ನು ಮಾಡಿದ್ದಾರೆ.

ಓದಿನಲ್ಲಿ ಸದಾ ಮುಂದೆ...

ತಮ್ಮ ಓದಿನಲ್ಲಿ ಹಿಂದೆ, ಆಟದಲ್ಲಿ ಆಕ್ಟೀವ್​ ಇಲ್ಲದ ವಿದ್ಯಾರ್ಥಿಯಾದರೆ, ಯೊಹಾನ್​ ಓದಿನಲ್ಲಿ ನಂಬರ್ 1 ಆಗುವುದರ ಜೊತೆಗೆ ಸಹೋದರ ಪೆದ್ದು ಇಶಾನ್​ನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿರುತ್ತಾನೆ. ಸದಾ ಆತನ ಪರವಾಗಿ ನಿಲ್ಲುತ್ತಿದ್ದ ಆ ಆದರ್ಶ ಅಣ್ಣನ ಪಾತ್ರದಲ್ಲಿ ನಟಿಸಿದ್ದ ಬಾಲನಟ ಸಚೇತ್ ಇಂಜಿನಿಯರ್ (Sachet Engineer) ಮುಖ ಬಹಳ ಮಂದಿಗೆ ನೆನಪಿನಲ್ಲಿ ಉಳಿದಿರುವುದು ಡೌಟ್​ ಬಿಡಿ. ಕ್ಯೂಟ್​ ಆಗಿ ಕಾಣಿಸಿಕೊಂಡ ಈತ 20 ವರ್ಷಗಳ ಬಳಿಕ ತಿರುಗಿ ನೋಡಿದರೆ, ದಂತ ವೈದ್ಯನಾಗಿ ಚಿನ್ನದ ಪದಕ ಮತ್ತು ಯುಕೆಯಲ್ಲಿ ಪೈಲಟ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ.

ಸಿನಿಮಾ ಕಥೆಯೇ ರಿಯಲ್ ಲೈಫ್!

ಚಿತ್ರದಲ್ಲಿ ಯೋಹಾನ್ ಕ್ಲಾಸ್‌ಗೆ ಫಸ್ಟ್, ಟೇಬಲ್ ಟೆನ್ನಿಸ್‌ನಲ್ಲಿ ಚಾಂಪಿಯನ್ ಆಗಿದ್ದ ಸಕಲಕಲಾವಲ್ಲಭ. ವಿಶೇಷವೆಂದರೆ, ನಿಜ ಜೀವನದಲ್ಲೂ ಸಚೇತ್ ಅದೇ ಹಾದಿ ಹಿಡಿದಿದ್ದಾರೆ. ಸಿನಿಮಾ ಸ್ಟಾರ್‌ ಪಟ್ಟದ ಹಿಂದೆ ಹೋಗದ ಸಚೇತ್, ಓದಿನಲ್ಲೇ ತಮ್ಮ ಸಾಧನೆಯನ್ನು ಮುಂದುವರಿಸಿದ್ದಾರೆ. ಡಿ.ವೈ.ಪಾಟೀಲ್ ವಿಶ್ವವಿದ್ಯಾಲಯದಲ್ಲಿ ಡೆಂಟಿಸ್ಟ್ರಿ ಪದವಿ ಮುಗಿಸಿದ ಇವರು, ‘ಪೆರಿಯೊಡಾಂಟಾಲಜಿ’ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಡೆಂಟಿಸ್ಟ್​, ಪೈಲಟ್​

ಪ್ರತಿಷ್ಠಿತ ಯುಸಿಎಲ್ ಈಸ್ಟ್‌ಮನ್ ಡೆಂಟಲ್ ಇನ್‌ಸ್ಟಿಟ್ಯೂಟ್‌ನಿಂದ ಉನ್ನತ ಶಿಕ್ಷಣ ಪಡೆದ ಸಚೇತ್, ಕಠಿಣವಾದ ಓವರ್‌ಸೀಸ್ ರಿಜಿಸ್ಟ್ರೇಷನ್ ಎಕ್ಸಾಮ್ (ORE) ಕೂಡ ಪಾಸ್ ಮಾಡಿ, ಈಗ ಯುಕೆಯಲ್ಲಿ (UK) ಅತ್ಯಂತ ಯಶಸ್ವಿ ಡೆಂಟಿಸ್ಟ್ ಆಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರೊಟ್ಟಿಗೆ ಆಕಾಶದಲ್ಲಿ ಹಾರಾಡುವ ಕನಸನ್ನೂ ಈಡೇರಿಸಿಕೊಂಡಿರುವ ಯೊಹಾನ್​, ಪೈಲಟ್​ ಆಗುವ ಮೂಲಕ ಹೆತ್ತವರಿಗೆ ಕೀರ್ತಿಯನ್ನು ತಂದಿದ್ದಾರೆ. ಸಿನಿಮಾದಲ್ಲಿ ಜೀನಿಯಸ್​ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದ ಯೊಹಾನ್​, ನಿಜ ಜೀವನದಲ್ಲೂ ಹಾಗೆಯೇ ಬದುಕುತ್ತಿರುವುದು ನಿಜಕ್ಕೂ ಇತರರಿಗೂ ಮಾದರಿ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net