Yash’s Toxic Tabahi Song Release:ಸ್ಯಾಂಡಲ್ವುಡ್ ನಟ ಯಶ್ ಅಭಿನಯದ, ನಟಿ ಮಣಿಯರ ತಾರಾಂಗಣವೇ ಇರುವ ಟಾಕ್ಸಿಕ್ ಸಿನಿಮಾ ರಿಲೀಸ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಸದ್ಯ ಈ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಹಾಡಾದ 'ತಬಾಹಿ' ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಗಿದೆ.
ರೂಮಿಯ ಶಾಯರಿ ಪ್ರಸ್ತಾಪ
ಜುಲೈ8ರ ಬೆಳಿಗ್ಗೆ 11:33ಕ್ಕೆ ರಿಲೀಸ್ ಆದ ಹಾಡಲ್ಲಿ ಯಶ್ ಮತ್ತು ಕಿಯಾರ ಸಖತ್ ಬೋಲ್ಡ್ ಆಗಿ, ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ರೂಮಿಯ ಶಾಯರಿಯೊಂದನ್ನು ಹಾಕಲಾಗಿದೆ. 'ತಪ್ಪು-ಒಪ್ಪು, ಒಳ್ಳೆಯದು ಕೆಟ್ಟ ಕಲ್ಪನೆಗಳನ್ನು ಮೀರಿ ಬದುಕುವ ಒಂದು ತಾಣವಿದೆ. ನಾನು ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ' ಎಂದು ತಬಾಹಿ ಹಾಡಿನ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ.
ತಬಾಹಿ ಹಾಡು ರಿಲೀಸ್ ಆದ ಬಗ್ಗೆ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್, ಬಾಲಿವುಡ್ ನಟಿ ಕಿಯಾರ ಅಡ್ವಾನಿ, ಯಶ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಡಿನ ಬಗ್ಗೆ ನೆಟ್ಟಿಗರಿಂದ ನಾನಾ ಚರ್ಚೆಗಳು ವ್ಯಕ್ತವಾಗಿತ್ತಿದೆ. ಇನ್ನು ಯಶ್ ಹಾಗೂ ಕಿಯಾರರ ರೊಮ್ಯಾಂಟಿಕ್ ಹಾಡಿನ, ಬೋಲ್ಡ್ ದೃಶ್ಯಗಳು ಸಾಕಷ್ಟು ಗಮನಸೆಳೆದಿವೆ.
ದ್ವಿ ಪಾತ್ರದಲ್ಲಿ ಯಶ್
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ದ್ವಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ,ತಾರಾ ಸುತಾರಿಯತಾ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕೆವಿಎನ್ ಹಾಗೂ ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ರಾಜೀವ್ ರವಿ ಛಾಯಾ ಚಿತ್ರಗ್ರಹಣ ಮಾಡಿದ್ದಾರೆ.
ಯಾವ್ಯಾವ ಭಾಷೆಯಲ್ಲಿ ರಿಲೀಸ್
ಟಾಕ್ಸಿಕ್ ಸಿನಿಮಾದ ಈ 'ತಬಾಹಿ' ಹಾಡು ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರಿ ಭಾವನಾತ್ಮಕವಾಗಿರುವ ಸಾಹಿತ್ಯವಿದೆ. ಹಲವು ಕಡೆ ಇಬ್ಬರ ಬೋಲ್ಡ್ ರೊಮ್ಯಾಂಟಿಕ್ ದೃಶ್ಯ ಭವ್ಯವಾಗಿ ಚಿತ್ರೀಕರಿಸಲಾಗಿದೆ, (ಏಜೆನ್ಸೀಸ್).