ಮತ್ತೊಂದು ದಾಖಲೆ: ದಕ್ಷಿಣ ಕೊರಿಯಾದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ ಕೆಜಿಎಫ್​-2

KGF 2
Published on

ಸಿಯೋಲ್​: ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿರುವ ಯಶ್​ ನಟನೆಯ ಸಿನಿಮಾ ಕೆಜಿಎಫ್​-2 ಮತ್ತೊಂದು ದಾಖಲೆ ನಿರ್ಮಿಸಿದೆ. ಗಳಿಕೆಯಲ್ಲಿ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದ ಕೆಜಿಎಫ್​ 2 ಮತ್ತೊಂದು ಸಾಧನೆ ಮಾಡಿದೆ.

ಬಿಡುಗಡೆಯಾದ 20 ದಿನಕ್ಕೆ ಸಾವಿರ ಕೋಟಿ ರೂ. ಗಳಿಕೆ ಕಂಡ ಬಾಹುಬಲಿ ನಂತರ ಸ್ಥಾನವನ್ನು ಅಲಂಕಿರಿಸಿರುವ ಕೆಜಿಎಫ್​-2 ವಿಶೇಷವಾಗಿ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಗೊಂಡಿದೆ.

ಕೆಜಿಎಫ್​2 ದಕ್ಷಿಣ ಕೊರಿಯಾದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದು ಕನ್ನಡಿಗರಿಗೆ ಸಂತಸದ ವಿಚಾರವೇ ಆಗಿದೆ. ಕನ್ನಡ ಸಿನಿಮಾವೊಂದು ವಿಶ್ವ ಮಟ್ಟಕ್ಕೆ ಬೆಳೆದು ನಿಂತಿರುವುದು ಕನ್ನಡಿಗರ ಹೆಮ್ಮೆಯೇ ಆಗಿದೆ.

ಅಲ್ಲದೇ ಅಮೆರಿಕ, ಮಲೇಶಿಯಾ, ಸಿಂಗಾಪುರ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಚಿತ್ರ ಪ್ರದರ್ಶನಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net