

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಲಿಪ್ಸ್ಟಿಕ್ ಮರ್ಡರ್', "ಡೆಡ್ಲಿ ಅೇರ್' ಸೇರಿ ಹಲವು ಚಿತ್ರಗಳಿಗೆ ಆ್ಯಕ್ಷನ್&ಕಟ್ ಹೇಳಿರುವ ರಾಜೇಶ್ ಮೂರ್ತಿ ನಿರ್ದೇಶನದ ಸೈೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ "ಬ್ಲಡಿ ಬಾಬು'. ಈ ಚಿತ್ರದ ಮೂಲಕ ಅವರ ಪುತ್ರ ಯಶಸ್ವ ನಾಯಕನಾಗಿ ಡೆಬ್ಯೂ ಮಾಡಿದ್ದಾರೆ. ಕಣ್ಣಿನಿಂದಲೇ ವಶೀಕರಣ ಮಾಡಿಕೊಳ್ಳುವ ಶಕ್ತಿ ಇರುವ ಬಾಬು (ದಿಲೀಪ್ ಕುಮಾರ್) ಬಾಲ್ಯದಿಂದಲೇ ಅಡ್ಡದಾರಿ ಹಿಡಿಯುತ್ತಾನೆ. ತನ್ನ ವಶೀಕರಣ ಶಕ್ತಿಯ ಮೂಲಕ ಕಳ್ಳತನ ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿರುತ್ತಾನೆ. ಹೈಪ್ರೊೈಲ್ ಹೋಟೆಲ್, ರೆಸಾರ್ಟ್ಗಳೇ ಆತನ ಟಾರ್ಗೆಟ್. ಹಾಗೆ ಸರಣಿ ಕಳ್ಳತನಕ್ಕೀಡಾದ ರೆಸಾರ್ಟ್ಗೆ ಬಾಬು (ಯಶಸ್ವ) ಕೆಲಸಕ್ಕೆ ಸೇರುತ್ತಾನೆ. ಆತನ ಮಾರ್ಷಲ್ ಆರ್ಟ್ಸ್ ಪರಿಣಿತಿ ನೋಡಿಯೇ ಮಾಲೀಕ (ನೆ.ಲ. ನರೇಂದ್ರಬಾಬು) ಬಾಬುಗೆ ಕೆಲಸ ಕೊಡುತ್ತಾನೆ. ಹೀಗೆ ವಶೀಕರಣದ ಮೂಲಕ ಕಳ್ಳದಾರಿ ಹಿಡಿದ ಕೆಟ್ಟ ಬಾಬು ಮತ್ತು ಶಕ್ತಿ&ಯುಕ್ತಿಯ ಮೂಲಕ ದುಷ್ಟರನ್ನು ಮಟ್ಟ ಹಾಕುವ ಬಾಬು (ಯಶಸ್ವ) ಮುಖಾಮುಖಿಯಾಗುತ್ತಾರೆ. ಹಾಗಾದರೆ ಈ ಗುಡ್ ಬಾಬು, ಆ ಬ್ಯಾಡ್ ಬಾಬುನ ಹೇಗೆ ಮಟ್ಟ ಹಾಕುತ್ತಾನೆ? ತಿಳಿಯಲು "ಬ್ಲಡಿ ಬಾಬು' ನೋಡಿ.
ಶ್ರೀಮಂತ ಕಾನ್ಸೆಪ್ಟ್ ಇರುವ ಬಡ ಸಿನಿಮಾ "ಬ್ಲಡಿ ಬಾಬು'. ಏಕೆಂದರೆ ಚಿತ್ರದ ಜಾನರ್, ಪರಿಕಲ್ಪನೆ, ಚಿತ್ರಕಥೆಯ ಗಟ್ಟಿತನ, ಆ್ಯಕ್ಷನ್ ಸನ್ನಿವೇಶಗಳು ಎಲ್ಲವೂ ರಿಚ್ ಆಗಿವೆ. ಆದರೆ, ಕಡಿಮೆ ಬಜೆಟ್ ಚಿತ್ರವಾದ ಕಾರಣ ಮೇಕಿಂಗ್ನಲ್ಲಿ ಆ ಶ್ರೀಮಂತಿಕೆ ಕಾಣುವುದಿಲ್ಲ. ಆದರೂ, ಅಲ್ಲಲ್ಲಿ ಟ್ವಿಸ್ಟ್ಗಳು ಮತ್ತು ಭರ್ಜರಿ ಆ್ಯಕ್ಷನ್ಗಳಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಮಾರ್ಷಲ್ ಆರ್ಟ್ಸ್, ಆ್ಯಕ್ಷನ್ ಮತ್ತು ಸ್ಟಂಟ್ಗಳನ್ನು ಕಲಿತು ಸಿದ್ಧತೆ ಮಾಡಿಕೊಂಡಿರುವ ಯಶಸ್ವ ನಟನೆಯ ವಿಷಯದಲ್ಲಿ ಸ್ವಲ್ಪ ಪಳಗಬೇಕಿದೆ. ವಿಲನ್ ಬಾಬು ಪಾತ್ರದ ದಿಲೀಪ್ ಕುಮಾರ್ ಕೂಡ. ನಾಯಕಿ ಲಿಲ್ಲಿ ಪಾತ್ರದಲ್ಲಿ ಸ್ಮಿತಾ ಗೌರ್ ಕೆಲವೇ ಸನ್ನಿವೇಶಗಳಿಗೆ ಸೀಮಿತವಾಗಿದ್ದಾರೆ. ನೆ.ಲ. ನರೇಂದ್ರ ಬಾಬು ವಿಭಿನ್ನ ಲುಕ್ ಮತ್ತು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪರಿಕಲ್ಪನೆಯ ಸೈಫೈ ಥ್ರಿಲ್ಲರ್ ಪ್ರಿಯರು ಒಮ್ಮೆ "ಬ್ಲಡಿ ಬಾಬು' ನೋಡಬಹುದು.