ಪ್ರಜ್ವಲ್‌ಗೆ ಜೋಡಿಯಾದ ಯಶಾ; ‘ಗಣ’ ಚಿತ್ರದಲ್ಲಿ ‘ಮಾನ್ಸೂನ್ ರಾಗ’ ಹುಡುಗಿ

yasha
Published on

ಬೆಂಗಳೂರು: ಕಳೆದ ವರ್ಷ ತೆರೆಗೆ ಬಂದ ‘ಮಾನ್ಸೂನ್ ರಾಗ’ ಹಾಗೂ ಕಾಲೇಜ್ ಲವ್‌ಸ್ಟೋರಿ ‘ಪದವಿಪೂರ್ವ’ ಚಿತ್ರಗಳಲ್ಲಿ ನಟಿಸಿದ್ದ ಹುಡುಗಿ ಯಶಾ ಶಿವಕುಮಾರ್. ಇದೀಗ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ‘ಗಣ’ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗಷ್ಟೆ ಚಿತ್ರದ ಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ವಿಜಯ್ ರಾಘವೇಂದ್ರ, ಶೃತಿ ಹರಿಹರನ್, ಪನ್ನಗಭರಣ, ವಾಸುಕಿ ವೈಭವ್, ಮೇಘನಾ ರಾಜ್, ರಾಗಿಣಿ ಪ್ರಜ್ವಲ್, ಸಿಂಪಲ್ ಸುನಿ, ಶರಣ್, ಮೇಘಾ ಶೆಟ್ಟಿ, ರಾಗಿಣಿ ದ್ವಿವೇದಿ, ಪ್ರಣಾಮ್ ದೇವರಾಜ್, ತರುಣ್ ಸುಧೀರ್, ರಚನಾ ಇಂದರ್, ಗಿರೀಶ್ ಶಿವಣ್ಣ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವು ತಾರೆಯರು ‘ಗಣ’ ಚಿತ್ರದ ಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡ ಶುಭಹಾರೈಸಿದ್ದಾರೆ. ಹರಿಪ್ರಸಾದ್ ಜಕ್ಕ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಪಾರ್ಥು ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಹರೀಶ್ ಕೊಮ್ಮೆ ಸಂಕಲನ, ಸತೀಶ್ ಕಲಾನಿರ್ದೇಶನವಿರಲಿದೆ. ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್ ಜತೆ ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ರಮೇಶ್ ಭಟ್ ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net