ಅಲೆಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲ...

Yash
Published on

ಉಡುಪಿ: ‘ಕೆಜಿಎಫ್ - ಚಾಪ್ಟರ್ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮಲ್ಪೆ ಪಡುಕೆರೆ ಬೀಚ್​ನಲ್ಲಿ ಗುರುವಾರ ಪ್ರಾರಂಭವಾಗಿದೆ. ಯಶ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವರು ಮೂರು ದಿನಗಳ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಜತೆಗೆ ಸಫಾರಿ, ರೇಂಜ್ ರೋವರ್, ಲ್ಯಾಂಡ್ ರೋವರ್​ನಂತಹ ದುಬಾರಿ ಕಾರುಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಕಡಲತೀರದಲ್ಲಿ ನಿಂತಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಯಶ್, ‘ಸಾಗರದ ಅಲೆಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಆದರೆ, ಅವುಗಳೊಂದಿಗೆ ಸಾಗುವುದನ್ನು ನೀವು ಕಲಿಯಬಹುದು. ಸುದೀರ್ಘ ವಿರಾಮದ ನಂತರ ರಾಕಿ ಇಂದು ಪ್ರಯಾಣಕ್ಕೆ ಸಿದ್ಧನಾಗಿದ್ದಾನೆ’ ಎಂದು ಬರೆದುಕೊಂಡಿದ್ದಾರೆ. ಯಶ್ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಬೀಚ್ ಬಳಿ ಸೇರಿದ್ದರು. ಚಿತ್ರೀಕರಣ ಸ್ಥಳದ ಫೋಟೋ ತೆಗೆಯದಂತೆ, ವಿಡಿಯೋ ಮಾಡದಂತೆ ನಿರ್ಬಂಧ ಹೇರಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net