ಮಾನ್​ಸ್ಟರ್​ನ ಮಾಸ್ಟರ್​ ಮೈಂಡ್​! "ರಾಮಾಯಣ' ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾದ ಯಶ್​

Amit - Yash
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಅವನು ಗ್ಯಾಂಗ್​ಸ್ಟರ್​ ಅಲ್ಲ, ಮಾನ್​ಸ್ಟರ್​' ಎಂಬ "ಕೆಜಿಎ್​' ಚಿತ್ರದ ಡೈಲಾಗ್​ ತುಂಬ ವೈರಲ್​ ಆಗಿತ್ತು. "ಕೆಜಿಎಫ್​​' ಸರಣಿಯ ಸಕ್ಸಸ್​ ಬಳಿಕ ಮಾನ್ಸ್​ಟರ್​ ಮೈಂಡ್​ ಕ್ರಿಯೇಷನ್ಸ್​ ಎಂಬ ಬ್ಯಾನರ್​ ಪ್ರಾರಂಭಿಸಿರುವ ನಟ ಯಶ್​, ಕೆವಿಎನ್​ ಪ್ರೊಡಕ್ಷನ್ಸ್​ ಜತೆ ಸೇರಿ "ಟಾಕ್ಸಿಕ್​' ಚಿತ್ರ ನಿರ್ಮಿಸುತ್ತಿದ್ದಾರೆ. ಗೀತು ಮೋಹನ್​ದಾಸ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ "ಟಾಕ್ಸಿಕ್​' ಮೂಲಕ ಯಶ್​ ಕೂಡ ನಿರ್ಮಾಣಕ್ಕಿಳಿದಿದ್ದಾರೆ. ಅದರ ಬೆನ್ನಲ್ಲೇ "ದಂಗಲ್​' ಖ್ಯಾತಿಯ ಬಾಲಿವುಡ್​ ನಿರ್ದೇಶಕ ನಿತೇಶ್​ ತಿವಾರಿ "ರಾಮಾಯಣ' ಸಿನಿಮಾ ನಿರ್ದೇಶಿಸುತ್ತಿದ್ದು, ಆ ಚಿತ್ರದಲ್ಲಿ ರಾಮನಾಗಿ ರಣಬೀರ್​ ಕಪೂರ್​, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್​ ಹಾಗೂ ರಾವಣನ ಪಾತ್ರದಲ್ಲಿ ಯಶ್​ ನಟಿಸಲಿದ್ದಾರೆ ಎನ್ನಲಾಗಿತ್ತು. ಮೂರು ಚಿತ್ರಗಳ "ರಾಮಾಯಣ' ಸರಣಿಗೆ ಯಶ್​ ತಲಾ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯೂ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿತ್ತು. ಇದೀಗ ಖುದ್ದು ರಾಕಿಭಾಯ್​ ಆ ಸುದ್ದಿಗೆ ಬ್ರೇಕ್​ ಹಾಕಿದ್ದಾರೆ. "ರಾಮಾಯಣ' ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಯಶ್​ ಕೈಜೋಡಿಸಿದ್ದಾರೆ.

"ರಾಮಾಯಣ' ಕ್ರಿಯೇಷನ್​ನತ್ತ ಫೋಕಸ್​:
ಮುಂಬೈನಲ್ಲಿ ಬೃಹತ್​ ಸೆಟ್​ಗಳನ್ನು ನಿರ್ಮಿಸಿ ಈಗಾಗಲೇ "ರಾಮಾಯಣ' ಚಿತ್ರದ ಶೂಟಿಂಗ್​ ನಡೆಸಲಾಗುತ್ತಿದೆ. ಈ ಚಿತ್ರವನ್ನು ಮೊದಲು ಹಾಲಿವುಡ್​ನ "ಹರ್ರಿಕೇನ್​ ಹೈಸ್ಟ್​', "ಹೊರೈಜನ್​ ಲೈನ್​', "ದ ಗಾರ್ಫೀಲ್ಡ್​ ಮೂವೀ' ಸೇರಿ ಹಿಂದಿಯಲ್ಲಿ "ಬ್ರಹ್ಮಾಸ್ತ್ರ : ಭಾಗ 1' ಸಿನಿಮಾ ನಿರ್ಮಿಸಿದ್ದ ಪೆಮ್​ ಫೋಕಸ್​ನ ನಮಿತ್​ ಮಲ್ಹೋತ್ರಾ ನಿರ್ಮಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರೊಂದಿಗೆ ಯಶ್​ ಒಡೆತನದ ಮಾನ್​ಸ್ಟರ್​ ಮೈಂಡ್​ ಕ್ರಿಯೇಷನ್ಸ್​ ಕೂಡ ಕೈಜೋಡಿಸಿದೆ. ಈ ಬಗ್ಗೆ ನಮಿತ್​, ""ರಾಮಾಯಣ' ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸತಿಯನ್ನು ಜಗತ್ತಿಗೆ ಪರಿಚಯಿಸಲು ಉತ್ಸುಕನಾಗಿದ್ದು, ನಾನು ಯಶ್​ ಅವರಲ್ಲೂ ಇದನ್ನು ಕಂಡುಕೊಂಡಿದ್ದೇನೆ. ಅವರ ಪಯಣ ನನ್ನಲ್ಲೂ ಸ್ಪೂರ್ತಿ ತುಂಬಿದೆ' ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ ಇದುವರೆಗೆ "ಟೆನೆಟ್​', "ಡ್ಯೂನ್​' ಸೇರಿ ಏಳು ಚಿತ್ರಗಳಿಗೆ ಅತ್ಯುತ್ತಮ ವಿಎ್​ಎಕ್ಸ್​ ಆಸ್ಕರ್​ ಪ್ರಶಸ್ತಿ ಪಡೆದಿರುವ ಡಿಎನ್​ಇಜಿ ಸಂಸ್ಥೆಯನ್ನೂ ಗ್ಲೋಬಲ್​ ಸಿಇಒಆಗಿ ಅಮಿತ್​ ಮುನ್ನಡೆಸುತ್ತಿದ್ದಾರೆ.

ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಕಾಟದಲ್ಲಿ ನಾನು ಅತ್ಯುತ್ತಮ ವಿಎ್​ಎಕ್ಸ್​ ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ಬ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚಿಸುವಾಗ "ರಾಮಾಯಣ' ವಿಚಾರವೂ ಬಂದಿತ್ತು. ಭಾರತೀಯ ಸಂಸತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಚಲನಚಿತ್ರದ ರೂಪ ತಾಳುತ್ತಿದೆ. ಆ ಅದ್ಭುತ ಅನುಭವವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆ. - ಯಶ್​, ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net