ಟೀಸರ್ ಬಿಡುಗಡೆ ಮಾಡಿ ಆಸೆ ಈಡೇರಿಸಿ ... ‘ಕೆಜಿಎಫ್​’ ತಂಡಕ್ಕೆ ಯಶ್ ಅಭಿಮಾನಿಗಳ ಮನವಿ

KGF 2 Final
Published on

ಸರಿಯಾಗಿ ಒಂದು ತಿಂಗಳ ಹಿಂದೆ ‘ಕೆಜಿಎಫ್​ 2’ ಚಿತ್ರತಂಡದಿಂದ ಒಂದು ಅಧಿಕೃತ ಪ್ರಕಟಣೆ ಹೊರಬಿದ್ದಿತ್ತು. ಅದು ಚಿತ್ರದ ಬಿಡುಗಡೆಯ ಕುರಿತಾಗಿತ್ತು. ‘ಕೆಜಿಎಫ್​ 2’ ಚಿತ್ರವನ್ನು ಅಕ್ಟೋಬರ್ 23ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಒಂದು ತಿಂಗಳ ಹಿಂದೆ ಹೇಳಿತ್ತು. ಆ ನಂತರ ಚಿತ್ರತಂಡದಿಂದ ಯಾವುದೇ ಸುದ್ದಿ ಬಂದಿಲ್ಲ. ಈಗ ಯಶ್ ಅವರ ಅಭಿಮಾನಿಗಳು, ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಘೋಷಿಸುವುದಕ್ಕೆ ಚಿತ್ರತಂಡಕ್ಕೆ ಮನವಿ ಸಲ್ಲಿಸಿದ್ದಾರೆ.

ಹೌದು, ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರಿಗೆ ಹಲವು ಅಭಿಮಾನಿ ಸಂಘಗಳಿದ್ದು, ಆ ಸಂಘಗಳೆಲ್ಲಾ ಟೀಸರ್ ಬಿಡುಗಡೆಯ ದಿನಾಂಕವನ್ನು ಘೋಷಿಸಿ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್‌ಗೆ ಮನವಿ ಮಾಡಿಕೊಂಡಿವೆ.

ಯಶ್ ಅಭಿಮಾನಿಗಳ ಈ ಮನವಿಗೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚಿತ್ರ ಬಿಡುಗಡೆಯಾಗುವುದಕ್ಕೆ ಇನ್ನೂ ಆರು ತಿಂಗಳು ಇರುವುದರಿಂದ, ಈ ಲಾಕ್‌ಡೌನ್ ಮುಗಿದು ಪರಿಸ್ಥಿತಿ ಸ್ವಲ್ಪ ತಿಳಿಯಾದ ಮೇಲೆ ಬಿಡುಗಡೆಯ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಯಶ್ ಅಭಿಮಾನಿಗಳ ಈ ಮನವಿಗೆ ಚಿತ್ರತಂಡ, ಏನು ಉತ್ತರ ನೀಡುತ್ತದೋ ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net