ನಾಲ್ಕು ವರ್ಷಗಳ ನಂತರ ಜತೆಯಾಗಿ ನಟಿಸಿದ ಯಶ್​-ರಾಧಿಕಾ

Yash - Radhika Pandit - Final
Published on

ಬೆಂಗಳೂರು: ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಜೋಡಿಯೂ ಒಂದು. 'ಮೊಗ್ಗಿನ ಮನಸ್ಸು', 'ಡ್ರಾಮಾ', 'ಮಿಸ್ಟರ್​ ಆಂಡ್​ ಮಿಸಸ್​ ರಾಮಾಚಾರಿ' ಮತ್ತು 'ಸಂತು ಸ್ಟ್ರೇಟ್​ ಫಾರ್ವರ್ಡ್​​' ಎಂಬ ನಾಲ್ಕು ಚಿತ್ರಗಳಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಜತೆಯಾಗಿ ನಟಿಸಿದ್ದರೂ, ಈ ಜೋಡಿ ಇನ್ನಷ್ಟು ಚಿತ್ರಗಳಲ್ಲಿ ನಟಿಸಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.

ಈಗ್ಯಾಕೆ ಈ ಮಾತು ಎಂದರೆ, ಯಶ್​ ಮತ್ತು ರಾಧಿಕಾ ಇಬ್ಬರೂ 'ಸಂತು ಸ್ಟ್ರೇಟ್​ ಫಾರ್ವರ್ಡ್​' ಚಿತ್ರದ ನಂತರ ಜೊತೆಯಾಗಿ ನಟಿಸಿರಲಿಲ್ಲ. ಮದುವೆಯಾದ ನಂತರ ಇಬ್ಬರೂ ಜತೆಯಾಗಿ ನಟಿಸಲಿ ಎಂದು ಅಭಿಮಾನಿಗಳ ಹಾರೈಕೆಯಾದರೂ, ಕಾರಣಾಂತರಗಳಿಂದ ಅವರಿಬ್ಬರೂ ತೆರೆ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಯಶ್​ ಮತ್ತು ರಾಧಿಕಾ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಈ ಬಾರಿ ಸಿನಿಮಾದಲ್ಲಲ್ಲ, ಒಂದು ಹೊಸ ಜಾಹೀರಾತಿನಲ್ಲಿ ಎಂಬುದು ಗೊತ್ತಿರಲಿ.

ಫ್ರೀಡಂ ಸನ್​ಫ್ಲವರ್​ ಆಯಿಲ್​ನಲ್ಲಿ ಯಶ್​ ಮತ್ತು ರಾಧಿಕಾ ಜತೆಯಾಗಿ ನಟಿಸಿದ್ದಾರೆ. ಫ್ರೀಡಂ ಸನ್​ಫ್ಲವರ್​ ಆಯಿಲ್​ ಬಳಸಿ ರಾಧಿಕಾ ಮಾಡುವ ಅಡುಗೆಯನ್ನು ಸವಿದು 'ಐ ಫೀಲ್​ ಗ್ರೇಟ್​' ಎಂದು ಯಶ್​ ಹೇಳುವುದು ಈ ಜಾಹೀರಾತಿನ ಸಾರ. ಸದ್ಯದಲ್ಲೇ ಈ ಜಾಹೀರಾತು ಪ್ರಸಾರವಾಗಲಿದೆ.

ಈ ಕುರಿತು ಟ್ವೀಟ್​ ಮಾಡಿರುವ ಯಶ್​, ತಾವು ಹಾಗೂ ರಾಧಿಕಾ ಫ್ರೀಡಂ ಸನ್​ಫ್ಲವರ್​ ಆಯಿಲ್​ನತ್ತ ಶಿಫ್ಟ್​ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಡಯಟ್​ನ ಒಂದು ಭಾಗವೇ ಆಗಿಬಿಟ್ಟಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net