ವಾಸಿಯಾಗದ ಸಮಸ್ಯೆ, ರಹಸ್ಯ ಬಿಚ್ಚಿಟ್ಟ ನಟಿ ಯಾಮಿ ಗೌತಮ್

Yami
Published on

ಇತ್ತೀಚೆಗಷ್ಟೇ ಮದುವೆಯಾಗಿ ಗಂಡ, ಮನೆ, ಸಿನಿಮಾ ಎಂದು ಬಿಜಿಯಾಗಿರುವ ನಟಿ ಯಾಮಿ ಗೌತಮ್ ಇದೀಗ ತಮಗಿರುವ ಒಂದು ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಕೆರಟೋಸಿಸ್ ಪೆಲಾರಿಸ್ ಎಂಬ ಚರ್ಮದ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಈ ಸಮಸ್ಯೆ ವಾಸಿ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಯಾಮಿ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್ ಮೂಲಕ ಫೋಟೋ ಹಂಚಿಕೊಂಡಿರುವ ಯಾಮಿ, ‘ನಾನು ಕೆಲ ವರ್ಷಗಳಿಂದ ಕೆರಟೋಸಿಸ್ ಪೆಲಾರಿಸ್ ಎಂಬ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಾನು ಟೀನೇಜರ್ ಆಗಿದ್ದಾಗ ಚರ್ಮದ ಮೇಲೆ ಸಣ್ಣಸಣ್ಣ ಗುಳ್ಳೆಗಳೆದ್ದವು. ವೈದ್ಯರ ಬಳಿ ಹೋದಾಗ, ನಾನು ಚರ್ಮರೋಗದಿಂದ ಬಳಲುತ್ತಿರುವ ವಿಷಯ ಗೊತ್ತಾಯಿತು ಎಂದಿದ್ದಾರೆ.

ಇಷ್ಟು ವರ್ಷಗಳ ಕಾಲ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಇತ್ತೀಚೆಗೊಂದು ಫೋಟೋಶೂಟ್ ಮಾಡಿಸಿದೆ. ಸಾಮಾನ್ಯವಾಗಿ ಫೋಟೋಶೂಟ್ ಆದ ನಂತರ, ಅದನ್ನು ಇನ್ನಷ್ಟು ಚಂದಗೊಳಿಸಲಾಗುತ್ತದೆ. ಈ ಮೂಲಕ ಈ ಗುಳ್ಳೆಗಳನ್ನು ಮರೆಮಾಚಲಾಗುತ್ತದೆ. ಆದರೆ, ಈ ಬಾರಿ ಅದನ್ನು ಮಾಡಲಿಲ್ಲ. ಯಾಕೆ ಈ ವಿಷಯವನ್ನು ಮರೆಮಾಚಬೇಕು ಮತ್ತು ಯಾಕೆ ಇದನ್ನು ಒಪ್ಪಿಕೊಳ್ಳಬಾರದು ಎಂಬ ಕಾರಣಕ್ಕೆ ಈ ನ್ಯೂನತೆಯನ್ನು ಒಪ್ಪಿಕೊಂಡಿದ್ದೇನೆ. ಈ ಮೂಲಕ ಭಯ ಮತ್ತು ಅಭದ್ರತೆಯನ್ನು ಮೆಟ್ಟಿನಿಲ್ಲುವ ಧೈರ್ಯ ಮಾಡಿದ್ದೇನೆ’ ಎಂದು ಯಾಮಿ ಪೋಸ್ಟ್ ಹಾಕಿದ್ದಾರೆ.-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net