

ಇಂದು ಅಮ್ಮಂದಿರ ದಿನ. ತಾಯ್ತನವನ್ನು ಸಂಭ್ರಮಿಸುವ ದಿನ. ಇದಕ್ಕೆ ಚಂದನವನದ ತಾರೆಯರು ಹೊರತಲ್ಲ. ಹಾಗೆ ನೋಡಿದರೆ, ಹಲವು ನಟಿಯರಿಗೆ ಅವರ ಅಮ್ಮಂದಿರೇ ಬೆಸ್ಟ್ ಫ್ರೆಂಡ್ಸ್. ಏಕೆಂದರೆ, ಮಕ್ಕಳ ಜತೆಗೆ ಚಿತ್ರೀಕರಣಕ್ಕೆ ಬರುವುದರ ಜತೆಗೆ, ಅವರ ಬೇಕು-ಬೇಡಗಳನ್ನು ನೋಡಿಕೊಳ್ಳುವುದೇ ತಾಯಂದಿರು. ಹೀಗೆ ಸಲಹುವ ತಾಯಂದಿರ ಬಗ್ಗೆ ನಮ್ಮ ಸ್ಯಾಂಡಲ್ವುಡ್ನ ನಟಿಯರು ಏನಂತಾರೆ.
ನಾನು ಯಾವಾಗ್ಲೂ ಅಪ್ಪನ ಮಗಳು ಎಂದೇ ಹೇಳುತ್ತಿದ್ದೆ. ಯಾರೇ ಕೇಳಿದರೂ ಹಾಗೇ ಹೇಳುತ್ತಿದ್ದೆ. ಅಪ್ಪ ಹೋದಮೇಲೆ ನನಗಿಂತ ಜಾಸ್ತಿ ಅಮ್ಮ ಬೇಜಾರಾದಳು. ಪಾರ್ಟನರ್ ಕಳೆದುಕೊಂಡಳು. ನನಗೆ ಎಲ್ಲಿ ನೋವಾಗುತ್ತದೋ ಎಂದು ನೋವನ್ನು ತಡೆದುಕೊಂಡಳು. ಕಷ್ಟವನ್ನು ನನ್ನ ಬಳಿ ಅದನ್ನು ಹೇಳಿಕೊಳ್ಳಲಿಲ್ಲ. ತುಂಬ ಧೈರ್ಯ ತೆಗೆದುಕೊಂಡಳು. ಹಾಗಾಗಿ ವಿಶ್ವದ ಸ್ಟ್ರಾಂಗೆಸ್ಟ್ ಮಹಿಳೆ ಎಂದರೆ ಅದು ಅಮ್ಮನೇ. ಒಂದು ಎಮೋಷನ್ ಅನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ತುಂಬ ಕಷ್ಟ. ಆದರೆ, ಅಮ್ಮ ಆದವಳು ಎಷ್ಟೋ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾಳೆ. ಅದೆಲ್ಲವನ್ನು ನುಂಗಿ ನಗುತ್ತಿರುತ್ತಾಳೆ. ಇದೀಗ ನಾನು ಬೆಂಗಳೂರಿಗೆ ಬಂದರೂ, ಅಮ್ಮ ಅಲ್ಲಿ ಒಬ್ಬಂಟಿ. ಆದರೂ ಗಂಡನ ಮನೆಯಲ್ಲಿದ್ದೇನೆ ಅನ್ನೋ ಧೈರ್ಯ ಆಕೆಗಿದೆ. ಕೇವಲ ಅಮ್ಮಂದಿರ ದಿನಕ್ಕೆ ಮಾತ್ರ ಫೋಟೋ ಶೇರ್ ಮಾಡಿಕೊಂಡು ಶುಭ ಕೋರುವ ಬದಲು, ಲೈಫ್ಟೈಮ್ ಚೆನ್ನಾಗಿ ನೋಡಿಕೊಳ್ಳಿ.
| ಹರ್ಷಿಕಾ ಪೂಣಚ್ಚ