

ಎಸ್ಸೆಕ್ಸ್ (ಯುನೈಟೆಡ್ ಕಿಂಗ್ಡಮ್ಸ್): ಪುರುಷ ಪ್ರಧಾನ ಕೆಲಸದ ವಾತಾವರಣದಿಂದ ಬೇಸರಗೊಂಡ ಎಸ್ಸೆಕ್ಸ್ನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ "ವಯಸ್ಕರ ನಟಿ" ಆಗಿ ಬದಲಾಗಿರುವುದು ಭಾರೀ ಸುದ್ದಿಯಾಗಿದೆ.
ಓನ್ಲಿ ಫ್ಯಾನ್ಸ್ (ಚಂದಾದಾರ ಆಧಾರಿತ ಅಶ್ಲೀಲ ವಿಡಿಯೋ ಖರೀದಿಸುವ ಜಾಲತಾಣ ವೇದಿಕೆಯಾಗಿದ್ದು, ಇದನ್ನು 2016ರಲ್ಲಿ ಲಾಂಚ್ ಮಾಡಲಾಯಿತು) ಹೆಸರಿನ ಜಾಲತಾಣ ವೇದಿಕೆಯಲ್ಲಿ ತಮ್ಮ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವ ವೃತ್ತಿಯನ್ನು ಆರಂಭಿಸಿದ್ದು, ಇದೀಗ 2.3 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಇಷ್ಟೇ ಅಲ್ಲದೆ, 265,000 ಪೌಂಡ್ (2,67,92,295 ರೂಪಾಯಿ) ಮೌಲ್ಯದ ಲಕ್ಷುರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ವಿವರಣೆಗೆ ಬರುವುದಾದರೆ, 7 ವರ್ಷಗಳ ಹಿಂದೆ ಚಾರ್ಲೆಟ್ ರೋಸ್ ತಮ್ಮ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಕಾರಣ ಪುರುಷ ಪ್ರಧಾನ ಕೆಲಸದ ವಾತಾವರಣ. ಇದು ರೋಸ್ಗೆ ಸ್ವಲ್ಪವು ಇಷ್ಟವಿರಲಿಲ್ಲ. ನಾನು ನನ್ನ ಅರ್ಹತೆಗಳನ್ನು ಪಾಸ್ ಮಾಡಿದ್ದೇನೆ. ಆದರೆ, ಅದು ವ್ಯರ್ಥ ಅನಿಸಿತು ಮತ್ತು ಕೆಲಸವು ಕೇವಲ ಪುರುಷ ಪ್ರಾಬಲ್ಯದಿಂದ ಕೂಡಿದೆ ಎಂಬುದು ಬಹಳ ಬೇಗನೆ ಸ್ಪಷ್ಟವಾಯಿತು. ಹೀಗಾಗಿ ನಾನು ಉದ್ಯೋಗವನ್ನು ತೊರೆದೆ ಎಂದು ಜಾಮ್ ಪ್ರೆಸ್ಗೆ ರೋಸ್ ಹೇಳಿಕೆ ನೀಡಿದ್ದಾರೆ.
ಸ್ಪೋರ್ಟ್ ಕಾರುಗಳಿಗೆ ಗ್ಲಾಮರಸ್ ಪೋಸ್ ನೀಡುವ ಕೆಲಸವನ್ನು ಆರಂಭಿಸು ಎಂದು ರೋಸ್ಗೆ ಆಕೆಯ ಸ್ನೇಹಿತೆ ಸಲಹೆ ನೀಡುತ್ತಾರೆ. ತಕ್ಷಣ ರೋಸ್ ಗ್ಲಾಮರ್ ಮತ್ತು ಒಳಉಡುಪಿನ ಮಾಡೆಲ್ ಆಗಿ ಬದಲಾಗುತ್ತಾರೆ. ಹೀಗಿರುವಾಗ 2016ರಲ್ಲಿ ತಮ್ಮ ವೇದಿಕೆ ಸೇರಿಕೊಳ್ಳುವಂತೆ ಓನ್ಲಿ ಫ್ಯಾನ್ಸ್ ರೋಸ್ಗೆ ಆಹ್ವಾನ ನೀಡುತ್ತದೆ.
ಇದಾದ ಬಳಿಕ ಓನ್ಲಿ ಫ್ಯಾನ್ಸ್ ಜಾಲತಾಣಕ್ಕೆ ಸೇರಿಕೊಳ್ಳುವ ರೋಸ್ ತನ್ನ ಪರಿಮಿತಿಯಲ್ಲಿ ನಿಯಮಿತವಾಗಿ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ಬರುತ್ತಿದ್ದು, ತಿಂಗಳಿಗೆ ತುಂಬಾ ಹಣವನ್ನು ಗಳಿಸುತ್ತಿದ್ದಾರೆ.
ಓನ್ಲಿ ಫ್ಯಾನ್ಸ್ ವೇದಿಕೆ ಬಗ್ಗೆ ಮಾತನಾಡಿರುವ ರೋಸ್, ಓನ್ಲಿ ಫ್ಯಾನ್ಸ್ ಅನ್ನು ಪೋರ್ನ್ ವೇದಿಕೆ ಅಂದುಕೊಂಡಿದ್ದಾರೆ. ನಾನು ಪೋರ್ನ್ ವಿರುದ್ಧವೂ ಅಲ್ಲ. ಆದರೆ, ಆ ಮಟ್ಟದ ವಿಷಯಗಳನ್ನು ನಾನು ಪೋಸ್ಟ್ ಮಾಡುವುದಿಲ್ಲ. ಇದು ನನಗೆ ವೈಯಕ್ತಿಕವಾಗಿದೆ ಮತ್ತು ನಾನು ನನ್ನ ಬೆರಳೆಣಿಕೆಯಷ್ಟು ಅಭಿಮಾನಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ನಾನು ಪ್ರತಿದಿನ ಅವರೊಂದಿಗೆ ಮಾತನಾಡುತ್ತೇನೆ ಮತ್ತು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)