ಕೃಷ್ಣನ ಜತೆಯಾಗ್ತಾರಾ ರಾಧಿಕಾ?

Radhika 14 June 20
Published on

ಬೆಂಗಳೂರು: ‘ನಿಮಗೆ ಆಹ್ವಾನವಿಲ್ಲ ... ನೀವು ಇರುವಲ್ಲಿಯೇ ನಮ್ಮನ್ನು, ನಮ್ಮ ಚಿತ್ರತಂಡವನ್ನು ಹರಸಿ, ಹಾರೈಸಿ ...’

ಹಿಂದೊಮ್ಮೆ ಆಹ್ವಾನ ಪತ್ರಿಕೆಯನ್ನು ಕೊಟ್ಟು, ಬಾಯಿ ತುಂಬಾ ಕರೆಯಲಾಗುತಿತ್ತು. ಆದರೆ, ನಿರ್ದೇಶಕ ನಾಗಶೇಖರ್ ತಮ್ಮ ಹೊಸ ಚಿತ್ರದ ಆಹ್ವಾನ ಪತ್ರಿಕೆಯನ್ನು ಕಳಿಸಿ, ಸಮಾರಂಭಕ್ಕೆ ಬರಬೇಡಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಇದಲ್ಲೇ ಹಾರೈಸಿ ಎಂದಿದ್ದಾರೆ. ಅದಕ್ಕೆ ಕಾರಣ, ಹೆಚ್ಚು ಜನ ಸೇರಬಾರದು ಎಂಬ ಸರ್ಕಾರದ ಆಜ್ಞೆ.

ಅಂದಹಾಗೆ, ನಾಗಶೇಖರ್ ಕಳಿಸಿರುವುದು, ‘ಶ್ರೀಕೃಷ್ಣಃಜಿಮೇಲ್.ಕಾಮ್ ಎಂಬ ತಮ್ಮ ಹೊಸ ಚಿತ್ರದ ಮುಹೂರ್ತದ ಆಹ್ವಾನ ಪತ್ರಿಕೆಯನ್ನ. ಲಾಕ್​ಡೌನ್​ನಿಂದಾಗಿ ಕಳೆದ ಮೂರು ತಿಂಗಳುಗಳಿಂದ ಚಿತ್ರರಂಗದಲ್ಲಿ ಯಾವುದೇ ಸಮಾರಂಭ ಇರಲಿಲ್ಲ. ಇದೀಗ ಲಾಕ್​ಡೌನ್ ತೆರವಾಗಿರುವುದರಿಂದ, ಜೂನ್ 18ರ ಗುರುವಾರದಂದು ‘ಶ್ರೀಕೃಷ್ಣಃಜಿಮೇಲ್.ಕಾಮ್ ಚಿತ್ರದ ಹಾಡುಗಳ ಕಂಪೋಸಿಂಗ್ ಪ್ರಾರಂಭಿಸುತ್ತಿದ್ದಾರೆ ಅವರು. ಅಂದೇ ಚಿತ್ರದ ಮುಹೂರ್ತ ಸಹ ಸರಳವಾಗಿ ನಡೆಯಲಿದೆ. ಇದನ್ನೂ ಓದಿ: ಪವಿತ್ರ ರಿಷ್ತಾದಲ್ಲಿನ ‘ಮಾನವ್’ ಎಲ್ಲಿ ? ಎಂದು ಕಂಬನಿ ಮಿಡಿಯುತ್ತಿದೆ ಸುಶಾಂತ್ ಅಭಿಮಾನಿ ಬಳಗ

ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುವ ನಾಗಶೇಖರ್, ‘ಲಾಕ್​ಡೌನ್​ನಲ್ಲಿ ಕಥೆ ಮಾಡಿದ್ದೆ. ಅದೀಗ ಚಿತ್ರವಾಗುತ್ತಿದೆ. ಇದರಲ್ಲಿ ‘ಲವ್ ಮಾಕ್ಟೇಲ್’ ಕೃಷ್ಣ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಅವರನ್ನು ಸಂರ್ಪಸಲಾಗಿದೆ. ಮಿಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತಿದೆ. ಅರ್ಜುನ್ ಜನ್ಯ ಹಾಡುಗಳ ಸಂಯೋಜನೆ ಮಾಡಲಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ’ ಎನ್ನುತ್ತಾರೆ ನಾಗಶೇಖರ್. ಇನ್ನು ಕೃಷ್ಣಗೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗುತ್ತಿರುವ ಬಗ್ಗೆ ಕೆದಕಿದರೆ, ‘ಇದೊಂದು ವಿಭಿನ್ನವಾದ ಲವ್​ಸ್ಟೋರಿ. ಬಹಳ ಮಜವಾಗಿ ಮೂಡಿ ಬಂದಿದೆ. ಈಗಾಗಲೇ ರಾಧಿಕಾ ಅವರನ್ನು ಸಂರ್ಪಸಿ ಕಥೆ ಹೇಳಿದ್ದೇನೆ. ಮಾತುಕಥೆ ನಡೆಯುತ್ತಿದೆ. ಅವರು ಒಪ್ಪದಿದ್ದರೆ ಭಾವನಾ ಮೆನನ್ ಲಿಸ್ಟ್​ನಲ್ಲಿದ್ದಾರೆ’ ಎನ್ನುತ್ತಾರೆ ನಾಗಶೇಖರ್. ಇದನ್ನೂ ಓದಿ:  VIDEO| ಥೇಟ್​ ರಶ್ಮಿಕಾರನ್ನೇ ಹೋಲುವ ಟಿಕ್​ಟಾಕ್​ ಸುಂದರಿ: ವಿಡಿಯೋ ನೋಡಿದ್ರೆ ಅಚ್ಚರಿಯಾಗೋದು ಖಂಡಿತ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net