ಮೂಡ್ ಇಲ್ಲ ಅಂತ ಮದುವೆ ಕ್ಯಾನ್ಸಲ್ ... ಸಲ್ಮಾನ್ ರಹಸ್ಯ ಬಿಚ್ಚಿಟ್ಟ ಸಾಜಿದ್

Salman Khan Final
Published on

ಒಂದು ಮದುವೆ ಕ್ಯಾನ್ಸಲ್ ಆಗೋದಕ್ಕೆ ನೂರೆಂಟು ಕಾರಣಗಳಿವೆ. ಆದರೆ, ಮೂಡ್ ಇಲ್ಲ ಎಂಬ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿದ್ದನ್ನ ಎಲ್ಲಾದರೂ ಕೇಳಿದ್ದೀರಾ? ಹೋಗಲಿ ಅಂತ ಭೂಪನನ್ನಾದರೂ ನೋಡಿದ್ದೀರಾ? ಅವರು ಬೇರೆ ಯಾರೂ ಅಲ್ಲ, ಸಲ್ಮಾನ್ ಖಾನ್.

ಹೌದು, ಸಲ್ಮಾನ್ ಇದುವರೆಗೂ ಹಲವರನ್ನು ಪ್ರೀತಿಸಿದ್ದಾರೆ, ಹಲವರ ಜತೆಗೆ ಏರ್ ಇಟ್ಟುಕೊಂಡಿದ್ದಾರೆ. ಆದರೆ, ಇದುವರೆಗೂ ಯಾರನ್ನೂ ಮದುವೆಯಾಗಿಲ್ಲ. ಮದುವೆಯಿಂದ ದೂರವೇ ಉಳಿದಿರುವ ಸಲ್ಮಾನ್, ಅದೊಂದು ದಿನ ಮದುವೆಯಾಗುವುದಕ್ಕೆ ತೀರ್ಮಾನಿಸಿದ್ದರಂತೆ. ಆದರೆ, ಮೂಡ್ ಇಲ್ಲ ಎಂಬ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿದರು ಎಂದು ಯಾರಿಗೂ ಗೊತ್ತಿಲ್ಲದ ಸಲ್ಮಾನ್ ಖಾನ್ ಜೀವನದ ಒಂದು ರಹಸ್ಯವನ್ನು ಅವರ ಸ್ನೇಹಿತ ಸಾಜಿದ್ ನಡಿಯಾಡ್ವಾಲಾ ಬಹಿರಂಗಪಡಿಸಿದ್ದಾರೆ.

21 ವರ್ಷಗಳ ಹಿಂದೆ 1991ರಲ್ಲಿ ಸಲ್ಮಾನ್ ಮದುವೆಯಾಗುವುದಕ್ಕೆ ತೀರ್ಮಾನಿಸಿದ್ದರಂತೆ. ಒಬ್ಬ ಹುಡುಗಿಯನ್ನೂ ಹುಡುಕಿಕೊಂಡಿದ್ದರಂತೆ. ತಮ್ಮ ತಂದೆ ಸಲೀಮ್ ಖಾನ್ ಹುಟ್ಟುಹಬ್ಬದಂದು ಮದುವೆಯಾಗುವುದಾಗಿ ಹೇಳಿ, ಆಹ್ವಾನ ಪತ್ರಿಕೆಯನ್ನೂ ಹಂಚಿದ್ದರಂತೆ. ಮದುವೆಗೆ ಇನ್ನೇನು ಐದಾರು ದಿನಗಳು ಇವೆ ಎನ್ನುವಾಗ, ಮದುವೆ ಕ್ಯಾನ್ಸಲ್. ಕಾರಣ ಕೇಳಿದರೆ, ಮೂಡ್ ಇಲ್ಲ ಎಂದರಂತೆ ಸಲ್ಮಾನ್.

ಎಲ್ಲಾ ಸರಿ, ಹುಡುಗಿ ಹುಡುಕಿಕೊಂಡು, ಮದುವೆ ಫಿಕ್ಸ್ ಮಾಡಿಕೊಂಡು, ಕೊನೆಗೆ ಕ್ಯಾನ್ಸಲ್ ಮಾಡಿದ್ದೇಕೆ? ಈ ಪ್ರಶ್ನೆಗೆ ಮಾತ್ರ, ಸಾಜಿದ್‌ಗೆ ಸೇರಿದಂತೆ ಯಾರಿಗೂ ಉತ್ತರ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net