ಜಾಹ್ನವಿ ಮತ್ತು ಖುಷಿ ಸೇರಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬೋನಿ ಕಪೂರ್​ ಹೇಳಿದ್ದೇಕೆ?

janhvi
Published on

ಮುಂಬೈ: ಶ್ರೀದೇವಿ ಪುತ್ರಿಯರಾದ ಜಾಹ್ನವಿ ಕಪೂರ್​ ಮತ್ತು ಖುಷಿ ಕಪೂರ್​ ಸೇರಿ ಮನೆಯವರೆಲ್ಲರೂ ಸುರಕ್ಷಿತವಾಗಿದ್ದೇವೆ. ಯಾರೊಬ್ಬರಲ್ಲೂ ಕೋವಿಡ್​ 19 ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಬೋನಿ ಕಪೂರ್​ ಹೇಳಿದ್ದಾರೆ.

ಬೋನಿ ಅವರ ಪುತ್ರಿಯರ ಸಿಬ್ಬಂದಿ ವರ್ಗದ ಫರ್ಹಾ ಖಾನ್​ ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಇವರ ಮನೆಗೆಲಸದ ಚರಣ್​ ಸಾಹು ಎಂಬುವರಿಗೆ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವ ಜಾಹ್ನವಿ ಮತ್ತು ಖುಷಿ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಜಾಹ್ನವಿ ಕಪೂರ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ತಂದೆ ಬೋನಿ ಕಪೂರ್​ ಬರೆದಿರುವ ಪತ್ರವನ್ನು ಪ್ರಕಟಿಸಿ, ಕಪೂರ್​ ಕುಟುಂಬದ ಎಲ್ಲರೂ ಹಾಗೂ ಸಿಬ್ಬಂದಿ ವರ್ಗದವರು ಕೂಡ ಆರೋಗ್ಯವಾಗಿ ಇರುವುದಾಗಿಯೂ, ಯಾರೂ ಆತಂಕಪಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಎಲ್ಲೂ ಹೋಗದೆ ಮನೆಯಲ್ಲೇ ಇರುವುದು ಕೋವಿಡ್​ 19 ಸೋಂಕಿನಿಂದ ಪಾರಾಗಲು ಇರುವ ಅತ್ಯುತ್ತಮ ಮಾರ್ಗ. ಆದ್ದರಿಂದ ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿರಿ ಎಂದು ಸಂದೇಶವನ್ನೂ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net