

ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಷಯವಾಗಿ ರಾಜಕಾರಣಿ ಮಕ್ಕಳು ಮತ್ತು ಕೆಲವು ಹೀರೋಗಳನ್ನು ಯಾಕೆ ಬಂಧಿಸುತ್ತಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ರಚಿತಾ ಹುಟ್ಟುಹಬ್ಬಕ್ಕೆ ‘ಲಿಲ್ಲಿ’ ತಂಡದ ಗಿಫ್ಟ್!
ಶುಕ್ರವಾರ ಲಂಕೇಶ್ ಆಪ್ ಬಿಡುಗಡೆಯ ನಂತರ ಮಾತನಾಡಿದ ಅವರು, 'ಡ್ರಗ್ಸ್ ಮಾಫಿಯಾದಲ್ಲಿ ಇನ್ನೂ ಸಾಕಷ್ಟು ಜನ ಇದ್ದಾರೆ. ಆದರೆ, ಇದುವರೆಗೂ ಕೆಲವು ನಟಿಯರನ್ನು ಮಾತ್ರ ಬಂಧಿಸಲಾಗಿದೆ. ಯಾಕೆ, ಈ ಪ್ರಕರಣದಲ್ಲಿ ಬರೀ ನಟಿಯರು ಮಾತ್ರ ಇರುವುದಾ? ಇಲ್ಲಿ ಇನ್ನೂ ಸಾಕಷ್ಟು ಜನ ಇದ್ದಾರೆ. ಯಾಕೆ ರಾಜಕಾರಣಿ ಮಕ್ಕಳನ್ನ ಮತ್ತು ದೊಡ್ಡ ನಟರನ್ನ ಬಂದಿಸುತ್ತಿಲ್ಲ? ಯಾರೇ ತಪ್ಪು ಮಾಡಿದರೂ ಅವರು ಶಿಕ್ಷೆ ಆಗಲೇ ಬೇಕು' ಎಂದು ಇಂದ್ರಜಿತ್ ಹೇಳಿದ್ದಾರೆ.
ಇದಕ್ಕೂ ಮುನ್ನ, ಕಳೆದ ತಿಂಗಳು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದ ಇಂದ್ರಜಿತ್, ಡ್ರಗ್ಸ್ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.
'ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ ಅದನ್ನು ಸಿಬಿಐಗೆ ವಹಿಸಬೇಕು. ಆಗ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಗಲಿವೆ. ಈ ವಿಷಯವಾಗಿ ತನಿಖೆಯಾದರೆ ಶವಗಳು ಕೂಡಾ ಎದ್ದು ಕೂರಲಿವೆ. ಡ್ರಗ್ಸ್ ಪ್ರಕರಣದ ತನಿಖೆ ತ್ವರಿತವಾಗಿ ಆಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, 'ಇಷ್ಟು ದಿನಗಳ ಕಾಲ ಆಗಿರುವುದು ಬಹಳ ಕಡಿಮೆಯೇ. ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡಿದರೆ, ಪೊಲೀಸರ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ. ಈ ದಂಧೆಯಲ್ಲಿ ನಟರು, ರಾಜಕಾರಣಿಗಳು, ಇವೆಂಟ್ ಮ್ಯಾನೇಜರ್ಗಳು ಸೇರಿದಂತೆ ಹಲವರು ಇದ್ದಾರೆ' ಎಂದು ಅವರು ಹೇಳಿದ್ದರು.