ರಾಜ್ಯದಲ್ಲಿ ಚಿತ್ರೀಕರಣ ಯಾವಾಗ?

Shooting
Published on

ಬೆಂಗಳೂರು: ಕಳೆದ ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಸಿನಿಮಾ ಶೂಟಿಂಗ್​ ಮತ್ತೆ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ಇಡೀ ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗಿ, ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.

ಸೀಮಿತ ಜನರನ್ನು ಬಳಸಿಕೊಂಡು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಶೂಟಿಂಗ್​ ಮಾಡುವಂತೆ ಹೇಳಿದೆ. ಅದರಂತೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಒಂದಿಷ್ಟು ಚಿತ್ರತಂಡಗಳು ಸೆಟ್​ಗೆ ಧುಮುಕಿವೆ. ಕಳೆದ ಒಂದೂವರೆ ತಿಂಗಳಿಂದ ಮನೆಯಲ್ಲಿಯೇ ಕಾಲ ಕಳೆದಿದ್ದ ಕಲಾವಿದರು. ತಂತ್ರರು ಶೂಟಿಂಗ್​ಗೆ ಮರಳಿದ್ದಾರೆ. ಮೊದಲ ಹಂತ ವಾಗಿ, ಆಮೀರ್​ ಖಾನ್​ ಪುತ್ರ ಜುನೈದ್​ ಖಾನ್​ ಅಭಿನಯದ "ಮಹಾರಾಜ' ಸಿನಿಮಾ ಲಾಕ್​ಡೌನ್​ ಬಳಿಕ ಸೆಟ್ಟೇರಿದ ಮೊದಲ ಚಿತ್ರವಾಗಿದೆ. ಮುಂಬೈನಲ್ಲಿ ಈ ಚಿತ್ರಕ್ಕಾಗಿ ಅದ್ಧೂರಿ ಸೆಟ್​ ಹಾಕಲಾಗಿದ್ದು, ಶೂಟಿಂಗ್​ ಸಲುವಾಗಿ 150ಕ್ಕೂ ಅಧಿಕ ಮಂದಿಯ ಕೋವಿಡ್​ ಪರೀೆ ಮತ್ತು ವ್ಯಾಕ್ಸಿನೇಷನ್​ ಪ್ರಕ್ರಿಯೆಯೂ ಮುಗಿದಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇನ್ನು, ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ "ಗಂಗೂಬಾಯಿ ಕಥೈವಾಡಿ' ಚಿತ್ರದ ಚಿತ್ರೀಕರಣ ಜೂನ್​ 15ರಿಂದ ಪ್ರಾರಂಭವಾಗಲಿದೆ.

ರಾಜ್ಯದಲ್ಲಿ ಯಾವಾಗ?: ಮಹಾರಾಷ್ಟ್ರದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದಂತೆಯೇ, ರಾಜ್ಯದಲ್ಲಿ ಯಾವಾಗ ಎಂಬ ಪ್ರಶ್ನೆ ಶುರುವಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ಇಲ್ಲದಿರುವುದಿಂದ, ಹೈದರಾಬಾದ್​ನಲ್ಲಿ ಕನ್ನಡದ ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದೆ. ಜೂನ್​ 14ರಿಂದ ರಾಜ್ಯದಲ್ಲಿ ಅನ್​ಲಾಕ್​ ಪ್ರಕ್ರಿಯೆ ಶುರುವಾಗಲಿದ್ದು, ಆ ನಂತರ ರಾಜ್ಯದಲ್ಲೂ ಹಂತಹಂತವಾಗಿ ಚಿತ್ರೀಕರಣಕ್ಕೆ ಅನುಮತಿ ಕೊಡಬಹುದು ಎಂಬ ನಿರೀೆ ಇದೆ. ಜೂನ್​ 14ರಿಂದಲೇ ಕಿರುತೆರೆ ಮತ್ತು ಹಿರಿತೆರೆ ಚಿತ್ರೀಕರಣಕ್ಕೂ ಅನುಮತಿ ನೀಡಲಾಗುತ್ತದಾ? ಅಥವಾ ಇನ್ನೂ ತಡವಾಗಲಿದೆಯೇ? ಎಂಬ ಕುತೂಹಲ ಎಲ್ಲರಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net