2014ರಲ್ಲೇ ನಡೆದಿತ್ತು ಪ್ರಿಯಾಂಕಾ ಚೋಪ್ರಾ ಮದುವೆ!! ಹಾಗಾದರೆ ನಿಕ್​ ಜೋನಸ್​ ಪಿಗ್ಗಿಗೆ ಎರಡನೇ ಪತಿಯೇ?

WhatsApp Image 2020-05-02 at 4.22.01 PM
Published on

ಬಾಲಿವುಡ್​ನಲ್ಲಿ ಹೆಸರು ಮಾಡಿ ಹಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಬಗ್ಗೆ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬಾಂಬ್​ ಸಿಡಿಸಿದೆ. 2014ರಲ್ಲೇ ಅಮೆರಿಕ ಮೂಲದ ವ್ಯಕ್ತಿಯೊಬ್ಬನನ್ನು ಪ್ರಿಯಾಂಕಾ ಮದುವೆಯಾಗಿದ್ದರಂತೆ! ಹಾಗಂತ ಆ ಕೌತುಕದ ವಿಚಾರವನ್ನು ಪ್ರಿಯಾಂಕಾ ಬಹಿರಂಗಪಡಿಸಿಲ್ಲ. ಬದಲಿಗೆ ಮದುವೆಯಾಗಿದ್ದ ಪತಿ ಮಹಾಶಯನೇ ಆರು ವರ್ಷದ ಹಿಂದಿನ ಆ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದಾನೆ. ಟ್ವಿಟರ್​ನಲ್ಲಿ ಮದುವೆಯ ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ.

ಹೌದು, ಆ ವ್ಯಕ್ತಿಯ ಹೆಸರು ಬ್ರೆಂಡಮ್​ ಚಸ್ಟರ್​. ಮೂಲತಃ ಅಮೆರಿಕಾದ ದಕ್ಷಿಣ ಫ್ಲೋರಿಡಾದವನು. ವೃತ್ತಿಯಲ್ಲಿ ಅಡ್ವೊಕೇಟ್​ ಆಗಿರುವ ಬ್ರೆಂಡಮ್, 2014ರಲ್ಲಿ ಪ್ರಿಯಾಂಕಾ ಅವರನ್ನು ಭೇಟಿಯಾಗಿದ್ದ. ಭಾರತೀಯ ಸಂಪ್ರದಾಯದಂತೆ ಹೂವಿನ ಮಾಲೆ ಹಾಕಿದ್ದ. ಪೋಟೋ ಸಹ ಕ್ಲಿಕ್ಕಿಸಿಕೊಂಡಿದ್ದ. ಆ ಆರು ವರ್ಷದ ಫೋಟೋವನ್ನು ಇದೀಗ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು, ‘ನಾನು 2014ರಲ್ಲೇ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆಯಾಗಿದ್ದೆ. ಅವರ ಕೊರಳಿಗೆ ಹೂ ಮಾಲೆ ಹಾಕಿದ್ದೆ. ಭಾರತೀಯ ಸಂಪ್ರದಾಯದ ಪ್ರಕಾರ ಹೀಗೆ ಮಾಲೆ ಹಾಕಿದರೆ ಮದುವೆಯಾದಂತೆ. ಭಾರತೀಯ ಮಾಧ್ಯಮ ಇದನ್ನು ಗಮನಿಸಿದರೆ, ಮದುವೆಯಾದ ಬಗ್ಗೆ ಪೂರ್ತಿ ಸಂದರ್ಶನ ನೀಡಬಲ್ಲೆ’ ಎಂದು ಬರೆದುಕೊಂಡಿದ್ದಾನೆ.

ಬ್ರೆಂಡಮ್​ ಪೋಸ್ಟ್​ಗೆ ಸಾಕಷ್ಟು ಕಮೆಂಟ್​ಗಳು ಸಂದಾಯವಾಗಿದ್ದು, ನೇರವಾಗಿ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಒಂದು ನಿಮಿಷದಲ್ಲಿ ಫೇಮಸ್​ ಆಗಬೇಕೆಂದು ಈ ರೀತಿಯಲ್ಲಿ ಮಾಡುತ್ತಿದ್ದೀಯಾ? ನಿಕ್​ ಸ್ಥಿತಿ ಏನಾಗಿರಬೇಡ, ಎಂದೂ ಕಮೆಂಟಿಸಿದ್ದಾರೆ. ಆದರೆ, ಈ ಬಗ್ಗೆ ಪ್ರಿಯಾಂಕಾ ತುಟಿ ಬಿಚ್ಚಿಲ್ಲ. ಅಂದಹಾಗೆ, 2018ರ ಡಿಸೆಂಬರ್​ನಲ್ಲಿ ರಾಜಸ್ತಾನದ ಜೋದ್​ಪುರದಲ್ಲಿ ನಿಕ್​ ಮತ್ತು ಪ್ರಿಯಾಂಕಾ ಮದುವೆಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net