

12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಈ ಬಾರಿಯ ಸಿನಿಮೋತ್ಸವದಲ್ಲಿ ಕನ್ನಡದ ಯಾವೆಲ್ಲ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂಬ ಕುತೂಹಲವೂ ನಿಪ್ರೇಮಿಗಳಲ್ಲಿರುತ್ತದೆ. ಅದರಂತೆ ಯಾವ್ಯಾವ ಕನ್ನಡ ಸಿನಿಮಾಗಳು ಸ್ಪರ್ಧೆಯಲ್ಲಿವೆ, ಮನರಂಜನಾತ್ಮಕ ಚಿತ್ರಗಳು ಯಾವ್ಯಾವು, ಬೇರೆ ಭಾಷೆ ಜತೆಗೆ ಪೈಪೋಟಿ ನಡೆಸುವ ಕನ್ನಡದ ಸಿನಿಮಾಗಳು ಎಷ್ಟಿವೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಸ್ಪರ್ಧೆಯಲ್ಲಿರುವ ಕನ್ನಡ ಸಿನಿಮಾಗಳು
1. 96 2. ಅಭ್ಯಂಜನ 3. ಬೆಲ್ಬಾಟಂ 4. ಭಿನ್ನ 5. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ 6. ಕವಲುದಾರಿ 7. ಮುಂದಿನ ನಿಲ್ದಾಣ
8. ಪಿಂಗಾರ (ತುಳು) 9. ರಾಗಭೈರವಿ 10. ರಂಗನಾಯಕಿ 11. ಸವರ್ಣ ದೀರ್ಘ ಸಂಧಿ 12. ಒಂದು ಶಿಕಾರಿಯ ಕತೆ 13. ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ 14. ಶುಭಮಂಗಳ
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ
ಮೂರು ಚಿತ್ರಗಳು
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಾಷ್ಟ್ರಮಟ್ಟದ ಸಿನಿಮಾ ಸ್ಪರ್ಧೆಯಲ್ಲಿ ಒಟ್ಟು 13 ಚಿತ್ರಗಳ ಪೈಕಿ ಕನ್ನಡದ 2, ತುಳುವಿನ 1 ಸಿನಿಮಾ ಸ್ಪರ್ಧೆಯಲ್ಲಿದೆ. ‘ರಂಗನಾಯಕಿ’, ಒಂದು ಶಿಕಾರಿಯ ಕಥೆ’ ಮತ್ತು ‘ಪಿಂಗಾರ’ ಪ್ರದರ್ಶನ ಕಾಣಲಿವೆ.
ಕನ್ನಡ ಮನರಂಜನಾತ್ಮಕ ಸಿನಿಮಾ ಪಟ್ಟಿ
1. ಅವನೇ ಶ್ರೀಮನ್ನಾರಾಯಣ 2. ಬೆಲ್ ಬಾಟಂ
3. ಐ ಲವ್ ಯೂ 4. ಕಾಳಿದಾಸ ಕನ್ನಡ ಮೇಷ್ಟ್ರು
5. ಕವಲುದಾರಿ 6. ಕಿಸ್ 7. ಮುನಿರತ್ನ ಕುರುಕ್ಷೇತ್ರ
8. ನಟ ಸಾರ್ವಭೌಮ 9. ಪೈಲ್ವಾನ್ 10. ಯಜಮಾನ