ಈಗ ವೀಕೆಂಡ್ ವಿಥ್ ರಮೇಶ್​ನಲ್ಲಿ ಪುನೀತ್ ಮತ್ತು ಯಶ್ ಸರದಿ..

WhatsApp Image 2020-04-21 at 11.41.15 AM
Published on

ಬೆಂಗಳೂರು: ಈಗಾಗಲೇ ವೀಕೆಂಡ್​ ವಿಥ್​ ರಮೇಶ್​ ಕಾರ್ಯಕ್ರಮ ಮರುಪ್ರಸಾರ ಆರಂಭಿಸಿದೆ. ದರ್ಶನ್​, ಜಗ್ಗೇಶ್​, ಸುದೀಪ್​, ಅಂಬರೀಶ್​ ಸೇರಿ ಹಲವು ಘಟಾನುಘಟಿಗಳ ಜೀವನ ತೆರೆಮೇಲೆ ಕಾಣಿಸಿದೆ. ಇದೀಗ ಪುನೀತ್​ ಮತ್ತು ಯಶ್​ ಸರದಿ. ಹೌದು, ವಿಕೆಂಡ್ ವಿಥ್ ರಮೇಶ್ ನ ಮೊದಲ ಎಪಿಸೋಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೀವನ ಕಥೆ ಈ ಲಾಕ್ ಡೌನ್ ಸಮಯದಲ್ಲಿ ಜೀ಼ ಕನ್ನಡದಲ್ಲಿ ಮರು ಪ್ರಸಾರವಾಗಲಿದೆ. ರಾಕಿಂಗ್​ ಸ್ಟಾರ್​ ಯಶ್ ಅವರ ಏರಿಳೀತದ ಜೀವನವೂ ವೀಕೆಂಡ್​ನಲ್ಲಿ ಮತ್ತೊಮ್ಮೆ ಅನಾವರಣವಾಗಲಿದೆ. ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡ ಯಶ್,​ ಸಮಾಜಮುಖಿ ಕಾರ್ಯಗಳಿಂದ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಇಬ್ಬರು ಸ್ಟಾರ್​ಗಳು ಇದೀಗ ಮತ್ತೆ ವೀಕೆಂಡ್​ ವಿಥ್​ ರಮೇಶ್​ ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 25ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪುನೀತ್ ರಾಜ್‍ಕುಮಾರ್ ಎಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಯಶ್ ಎಪಿಸೋಡ್ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net