'ಪ್ರಿಯ ಮೈಕಿ..ನಿನಗೆ ನ್ಯಾಯ ಸಿಗುವವರೆಗೂ ವಿಶ್ರಮಿಸಲ್ಲ'; ನಾಯಿ ಸಾವಿನ ವಿರುದ್ಧ ಮತ್ತೆ ಸಿಡಿದೆದ್ದ 'ಮುಂಜಾನೆ' ನಟಿ Manjari Fadnnis

Manjari Fadnnis on Dog Mikey Death
Manjari Fadnnis on Dog Mikey Death
Published on
Manjari Fadnnis on Dog Mikey Death: 'ಪ್ರಿಯ ಮೈಕಿ..ನಿನಗಾದ ಅನ್ಯಾಯಕ್ಕೆ ಹೋರಾಡಲು ನಿನ್ನನ್ನು ಅತಿಯಾಗಿ ಪ್ರೀತಿ ಮಾಡುವ ಜನರಾದ ನಾವಿದ್ದೇವೆ. ಸೂಕ್ತ ಕಾನೂನು ಕ್ರಮದೊಂದಿಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಾವ್ಯಾರು ವಿಶ್ರಾಂತಿಯನ್ನೇ ಪಡೆದುಕೊಳ್ಳೋದಿಲ್ಲ' ಹೀಗೆಂದು ಮತ್ತೆ ನಾಯಿ ಸಾವಿನ ವಿರುದ್ಧ ಸಿಡಿದೆದ್ದಿದ್ದು ಕನ್ನಡದ ಮುಂಜಾನೆ ಸಿನಿಮಾ ನಟಿ ಮಂಜರಿ ಫಡ್ನಿಸ್​.

ಗಳಗಳನೆ ಅತ್ತಿದ್ದ ಮಂಜರಿ

ನಟಿ ಮಂಜರಿ ಫಡ್ನಿಸ್​ ಅವರು ಹಲವು ಬೀದಿ ನಾಯಿ ದತ್ತು ಪಡೆದು ಸಾಕುತ್ತಿದ್ದರು. ಅದರಲ್ಲಿ ಮೈಕಿ ಸಹ ಒಂದು. ಹೀಗಿರುವಾಗ ಒಮ್ಮೆ ತಮ್ಮ ಅಚ್ಚು ಮೆಚ್ಚಿನ ನಾಯಿಯನ್ನು ದುಷ್ಕರ್ಮಿಗಳು ಕಬ್ಬಿಣದ ರಾಡ್​ನಿಂದ ಹೊಡೆದು ಹಲ್ಲೆ ಮಾಡಿ ಕೊಲ್ಲಲಾಗಿದೆ . ಆನಂತರ ಅದನ್ನು ಮತ್ಯಾವುದೋ ಪ್ರದೇಶದಲ್ಲಿ ಬಿಸಾಡಲಾಗಿದೆ ಎಂದು ಜೋರಾಗಿ ಅಳುತ್ತಾ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು.
ಜೊತೆಗೆ ಪ್ರಾಣಿ ಹಿಂಸೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿಯವರೆಗೂ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮತ್ತೆ ನಾಯಿಯನ್ನು ನೆನೆದು ಮತ್ತೊಂದು ಪೋಸ್ಟ್​ ಹಂಚಿಕೊಂಡಿರುವುದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ,. ನೆಟ್ಟಿಗರು ಕಿಡಿಗೇಡಿಗಳ ವಿರುದ್ಧ ಕಿಡಿಕಾರಿ, ನಾಯಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಮಂಜರಿ ಪೋಸ್ಟ್​ನಲ್ಲಿ ಏನಿದೆ?

'ಪ್ರಿಯ ಮೈಕಿ.. ನಿನ್ನ ನಿಧನದ ಬಗ್ಗೆ ಮಾಹಿತಿ ತಿಳಿದ ದಿನದಿಂದ ನಿನ್ನನ್ನು ಪ್ರೀತಿಸುವ ಜನರಾದ ನಾವು ನಿದ್ದೆಯೇ ಮಾಡಿಲ್ಲ,. ನಿನ್ನನ್ನು ಕ್ರೂರವಾಗಿ ಕೊಂದವರಿಗೆ ಕಠಿಣ ಶಿಕ್ಷೆಯಾಗುವವರೆಗೂ ನಾವು ವಿಶ್ರಮಿಸೋದಿಲ್ಲ. ಕಿಡಿಗೇಡಿಗಳ ವಿರುದ್ಧ ಸಾಕ್ಷಿಯನ್ನು ಕಲೆ ಹಾಕುತ್ತಿದ್ದೇವೆ. ನಿನಗಾಗಿ ಕೆಲಸ ಮಾಡುವ ಜನರಿದ್ದಾರೆ' ಎಂದು ಭಾವನಾತ್ಮಕವಾಗಿ ಮಂಜರಿ ಫಡ್ನಿಸ್ ಬರೆದುಕೊಂಡಿದ್ದಾರೆ.
ಮೈಕಿ ನೀನು ಕಣ್ಮರೆಯಾದ್ರೆ ಯಾರು ಏನೂ ಮಾಡೋಕೆ ಸಾಧ್ಯವಿಲ್ಲ ಎಂದು ದುಷ್ಕರ್ಮಿಗಳು ಭಾವಿಸಿ ಸುಮ್ಮನಿರಬಹುದು. ಆದರೆ ನಾಯಿಗಳು ಈ ಸಮುದಾಯದ ಅವಿಭಾಜ್ಯ ಅಂಗ. ನೀನು ಬೀದಿ ನಾಯಿ ನಿನ್ನನ್ನು ಕೇರ್​ ಮಾಡುವವರಿಲ್ಲ ಎಂದು ಭಾವಿಸಿದ್ದರೆ ಅದು ತಪ್ಪು' ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net