ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡಿ: ಜಂಟಲ್​ಮನ್​ಪ್ರಿ-ರಿಲೀಸ್​ನಲ್ಲಿ ದರ್ಶನ್ ಮಾತು

Darshan
Published on

ಬೆಂಗಳೂರು: ‘ಕನ್ನಡಿಗರು ಸ್ವಲ್ಪ ಎದ್ದೇಳಬೇಕು, ಎದ್ದು ಮೊದಲು ಕನ್ನಡ ಸಿನಿಮಾಗಳನ್ನು ನೋಡಬೇಕು’ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಜಂಟಲ್​ಮನ್’ ಸಿನಿಮಾದ ಪ್ರಿ-ರಿಲೀಸ್ ಇವೆಂಟ್​ನಲ್ಲಿ ಅವರು ಮಾತನಾಡಿದರು. ‘ಕನ್ನಡ ಸಿನಿಮಾ ವೀಕ್ಷಕರ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿದೆ. ಒಳ್ಳೊಳ್ಳೆಯ ಸಿನಿಮಾಗಳನ್ನು ನೋಡಿ ಹರಸಬೇಕು. ಕನ್ನಡದಲ್ಲೀಗ ಉತ್ತಮ ಕಂಟೆಂಟ್ ಇರುವ ಸಿನಿಮಾಗಳು ಬರುತ್ತಿವೆ. ‘ಜಂಟಲ್​ಮನ್’ ಸಿನಿಮಾದ ಟೀಸರ್, ಟ್ರೇಲರ್, ಹಾಡುಗಳನ್ನು ನೋಡಿದೆ.. ಚಿತ್ರ ವಿಶೇಷವಾಗಿದೆ. ಈ ರೀತಿಯ ಕಂಟೆಂಟ್ ಇದುವರೆಗೂ ಎಲ್ಲಿಯೂ ಬಂದಿಲ್ಲ. ಜತೆಗೆ ಗುರು ದೇಶಪಾಂಡೆ ನಿರ್ದೇಶಕರಾಗಿದ್ದುಕೊಂಡು ಬೇರೆ ನಿರ್ದೇಶಕರಿಗೆ ಅವಕಾಶ ನೀಡುವುದು ಬಹಳ ದೊಡ್ಡ ವಿಚಾರ. ಹಾಗಾಗಿ ಈ ಚಿತ್ರವನ್ನು ಎಲ್ಲ ಕನ್ನಡಿಗರು ನೋಡಿ ಗೆಲ್ಲಿಸಬೇಕು. ನಾವು ನಮ್ಮ ಕನ್ನಡ ಸಿನಿಮಾಗಳನ್ನು ನೋಡದ ಹೊರತು ನಮ್ಮ ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ’ ಎಂದರು.

‘ಸಂಚಾರಿ ವಿಜಯ್ ನನ್ನ ಪ್ರಕಾರ ಬಹಳ ದೊಡ್ಡ ನಟ. ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಅವರ ನಟನೆ ಅದ್ಭುತ. ಅದರಲ್ಲಿ ಅವರ ನಟನೆ ಕಂಡು ಫಿದಾ ಆಗಿ ಹೋದೆ. ಇಂಥ ಒಬ್ಬ ನಟ ಕನ್ನಡ ಚಿತ್ರರಂಗದಲ್ಲಿ ಇದ್ದಾರಲ್ಲ ಎಂದು ನಾನು ಖುಷಿ ಪಟ್ಟಿದ್ದೇನೆ. ಈ ಚಿತ್ರವನ್ನು ಬೇರೆ ಭಾಷೆಯಲ್ಲಿ ಮಾಡಿದ್ದರೆ ಅದಕ್ಕೆ ಹೆಚ್ಚಿನ ಬೆಲೆ ಸಿಗುತ್ತಿತ್ತು. ನಮ್ಮವರೇ ಮಾಡಿದಾಗ ನಾವು ಅದನ್ನು ಕೈ ಬಿಡುತ್ತೇವೆ. ಹೀಗೆಲ್ಲ ಆದಾಗ ಬೇಸರವಾಗುತ್ತದೆ’ ಎಂದು ನಟ ದರ್ಶನ್ ಅಭಿಪ್ರಾಯಪಟ್ಟರು.

ತಮಿಳಿನಲ್ಲಿ ಒಬ್ಬ ನಟ ಇದ್ದಾರೆ, ಅವರಿಗೆ ದೊಡ್ಡ ಹೆಸರಿದೆ. ಆದರೆ ನನ್ನ ಪ್ರಕಾರ ಅವರು ಸಂಚಾರಿ ವಿಜಯ್ಗಿಂತಲೂ ಅದ್ಭುತ ನಟರಲ್ಲ. | ದರ್ಶನ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net