ಬಾಲಿವುಡ್​ನಲ್ಲಿ ಚೆಸ್ ಮಾಂತ್ರಿಕನ ಬಯೋಪಿಕ್

viswanathan-anand-biopic-in-bollywood
Published on

ಬಾಲಿವುಡ್​ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್​ಗಳು ತೆರೆಗೆಬಂದಿವೆ. ತೆರೆಮರೆಯ ಹೀರೋನನ್ನು ಇಡೀ ದೇಶಕ್ಕೆ ಬಯೋಪಿಕ್ ಮೂಲಕ ಪರಿಚಯಿಸಲಾಗಿದೆ. ಇದೀಗ ಚೆಸ್ ಗ್ರ್ಯಾಂಡ್​ ಮಾಸ್ಟರ್ ವಿಶ್ವನಾಥನ್ ಆನಂದ್ ಬಯೋಪಿಕ್ ಸರದಿ.

ಖ್ಯಾತ ಸಿನಿಮಾ ನಿರ್ದೇಶಕ ಆನಂದ್ ಎಲ್ ರಾಯ್ ವಿಶ್ವನಾಥನ್ ಆನಂದ್ ಅವರ ಚೆಸ್ ಜೀವನವನ್ನು ತೆರೆಮೇಲೆ ತೋರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ, ಬಯೋಪಿಕ್​ನಲ್ಲಿ ವಿಶ್ವನಾಥನ್ ಅವರ ಪಾತ್ರ ಮಾಡುವವರು ಯಾರು? ಸದ್ಯಕ್ಕೆ ಅಭಿಷೇಕ್ ಬಚ್ಚನ್ ಚೆಸ್ ಗ್ರಾ್ಯಂಡ್ ಮಾಸ್ಟರ್ ಆಗಲಿದ್ದಾರೆ ಎಂಬಂಥ ಮಾತುಗಳು ಕೇಳಿಬಂದಿವೆಯಾದರೂ, ನಿರ್ದೇಶಕ ಆನಂದ್ ಎಲ್ ರಾಯ್ ಆ ವಿಚಾರವನ್ನು ಬಹಿರಂಗಪಡಿಸಿಲ್ಲ.

ಕೇವಲ ಸಿನಿಮಾ ಮಾಡುವ ವಿಚಾರವನ್ನಷ್ಟೇ ಅಧಿಕೃತ ಮಾಡಿದ್ದು, ಕಲಾವಿದರ ಆಯ್ಕೆ ಸೇರಿ ಶೀರ್ಷಿಕೆ ವಿಚಾರವನ್ನು ಮುಂದಿನ ವರ್ಷವೇ ಘೋಷಣೆ ಮಾಡಲಿದ್ದಾರಂತೆ. ವಿಶ್ವನಾಥನ್ ಚೆಸ್​ನಲ್ಲಿ ಒಟ್ಟು 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಅದರ ಹಿನ್ನೆಲೆಯಲ್ಲಿಯೇ ಸಿನಿಮಾ ಮೂಡಿಬರಲಿದ್ದು, ಸದ್ಯ ಸ್ಕ್ರಿಪ್ಟಿಂಗ್ ಹಂತದಲ್ಲಿದೆ. 2021 ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಮಹಾವೀರ್ ಜೈನ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net