

ಬೆಂಗಳೂರು: ವಿಷ್ಣ್ಣುವರ್ಧನ್ 70ನೇ ಜಯಂತಿ ನಿಮಿತ್ತ ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣು ಸಮಾಧಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅಭಿಮಾನಿಗಳೇ ವಿಶೇಷ ಪೂಜೆ ಸಹ ಆಯೋಜಿಸಿದ್ದರು.
ಇನ್ನು ವಿಷ್ಣುವರ್ಧನ್ ಅಳಿಯ ಅನಿರುದ್ಧ, ‘ಪ್ರತಿ ವರ್ಷ ಅಪ್ಪಾಜಿ ಜನ್ಮದಿನದ ನಿಮಿತ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆವು. ಕರೊನಾ ಹಿನ್ನೆಲೆಯಲ್ಲಿ ಈ ಸಲ ಮಾಡಲಾಗಿಲ್ಲ ಎಂದಿದ್ದಾರೆ. ಇತ್ತ ನಟಿ ಶ್ರುತಿ ಸರಳವಾಗಿ ಮಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.