

ಬೆಂಗಳೂರು: ಭಾರತ ಅಷ್ಟೇ ಅಲ್ಲ ಪ್ರಪಂಚದಲ್ಲೇ ಹವಾ ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್2 ಸಿನಿಮಾ, ಯಾವಾಗ ತೆರೆ ಮೇಲೆ ಬರುತ್ತೋ ಎಂದು ಸಿನಿಪ್ರಿಯರು ತುದಿಗಾಲ ಮೇಲೆ ನಿಂತಿದ್ದಾರೆ.
ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ 165 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಕಂಡು ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಅದೇ ರೀತಿ ಈ ಟ್ರೈಲರ್ನ ಹಿನ್ನೆಲೆ ದ್ವನಿಯಲ್ಲಿ ಕೇಳಿಸುವ ಪ್ರಕಾಶ್ ರಾಜ್ ಅವರ ಡೈಲಾಗ್ ಅಂತೂ ಭಾರೀ ಹವಾ ಸೃಷ್ಟಿಸಿದೆ.
ಕೆಜಿಎಫ್ ಚಾಪ್ಟರ್ 1 ನ ಡೈಲಾಗ್ 'ಪವರಪುಲ್ ಪಿಪಲ್ ಕಮ್ಸ ಫ್ರಮ್ ಪವರ್ ಪುಲ್ ಪ್ಲೇಸಸ್' ಎಂದು ಹಿಟ್ ಆಗಿತ್ತು. ಆದರೆ, ಇ ಡೈಲಾಗ್ಗೆ ಡಿಚ್ಚಿ ಕೊಟ್ಟಿರುವ ಕೆಜಿಎಫ್ ಚಾಪ್ಟರ್ 2, 'ಪವರಪುಲ್ ಪಿಪಲ್ ಮೇಕ್ಸ್ ಪ್ಲೇಸಸ್ ಪವರಪುಲ್' ಎಂದು ಹೊಸ ಡೈಲಾಗ್ ಬಿಟ್ಟು ಜನಮನ ಸೋರೆಗೊಂಡಿತ್ತು.
ಇದೀಗ ಇದೇ ಡೈಲಾಗ್ನ್ನು ಖ್ಯಾತ ಕ್ರಿಕೆಟ್ ತಾರೆ ವೀರೆಂದ್ರ ಸೆಹ್ವಾಗ ನೆನಪಿಸಿದ್ದಾರೆ. ಶಿವಾಜಿ ಜಯಂತಿ ಪ್ರಯುಕ್ತ ಟ್ವೀಟ್ ಮಾಡಿರುವ ಅವರು ಕೆಜಿಎಫ್ ಡೈಲಾಗ್ ಸ್ಮರಿಸಿದ್ದಾರೆ. ಆ ಮೂಲಕ ಶಿವಾಜಿ ಜಯಂತಿಗೆ ಶುಭಾಶಯ ಕೋರಿದ್ದಾರೆ. ಈ ಟ್ವೀಟ್ನ್ನು 9696 ಜನ ರಿಟ್ವೀಟ್ ಮಾಡಿದ್ದು, 85 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.