ಪತ್ನಿ, ಪುತ್ರನ ಜತೆ ವಿನೋದ್​ ರಾಜ್​!? ಚಂದನವನದಲ್ಲಿ ಸಂಚಲನ ಮೂಡಿಸಿದೆ ಈ ನಿರ್ದೇಶಕನ ಮಾತು

Vinod Raj
Published on

ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಡಾನ್ಸ್​ಗೆ ಹೆಸರುವಾಸಿಯಾಗಿದ್ದ ವಿನೋದ್​ ರಾಜ್​ ಕಾರಣಾಂತರಗಳಿಂದ ಸಿನಿಮಾ ರಂಗದಿಂದ ದೂರ ಸರಿದು ತಮ್ಮ ತಾಯಿ ಲೀಲಾವತಿ ಅವರ ಜೊತೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. ತೋಟ ನೋಡಿಕೊಂಡು ರೈತನಾಗಿ ನೆಮ್ಮದಿಯುತ ಜೀವನ ನಡೆಸುತ್ತಿದ್ದಾರೆ.

ಅನೇಕ ಬಾರಿ ವಿನೋದ್​​ ರಾಜ್​ ಅವರ ಮದುವೆ ಕುರಿತು ಪ್ರಶ್ನೆ ಎದ್ದರೂ ಈವರೆಗೂ ಅವರ ವೈವಾಹಿಕ ಜೀವನದ ಬಗ್ಗೆ ಯಾವುದೇ ಸ್ಪಷ್ಟತೆ ಅಥವಾ ಸುಳಿವು ಸಿಕ್ಕಿರಲಿಲ್ಲ. ಬಹುತೇಕರು ಅವರಿಗೆ ಮದುವೆಯೇ ಆಗಿಲ್ಲ ಅಂದುಕೊಂಡಿದ್ದಾರೆ. ಆದರೆ, ಇದೀಗ ನಿರ್ದೇಶಕರೊಬ್ಬರು ಆಡಿರುವ ಮಾತು ಸ್ಯಾಂಡಲ್​ವುಡ್​ನಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ.

ಭಾರಿ ಚರ್ಚೆಗೆ ಕಾರಣವಾದ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ವಿನೋದ್ ರಾಜ್ ಮದುವೆಗೆ ಸಂಬಂಧಿಸಿದ ಪೋಸ್ಟ್ ಹಾಗು ಪೋಟೋ ವೈರಲ್​ ಆಗುತ್ತಿದೆ. ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಪ್ತರಾಗಿರುವ ನಿರ್ದೇಶಕ ಪ್ರಕಾಶ್ ರಾಜ್ ಮೆಹೋ ಅವರ ಪೋಸ್ಟ್ ಇದೀಗ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಒಂದೇ ಫೋಟೋದಲ್ಲಿ ವಿನೋದ್​ ರಾಜ್​, ತಾಯಿ ಲೀಲಾವತಿ ಇದ್ದಾರೆ. ಅವರೊಂದಿಗೆ ಇರುವವರು ವಿನೋದ್​ ರಾಜ್​ ಪತ್ನಿ ಮತ್ತು ಪುತ್ರನೆಂದು ಹೇಳಲಾಗಿದೆ.

Vinod Raj Family

ಚೆನ್ನೈನಲ್ಲಿ ಆಸ್ತಿ ಖರೀದಿ

ಲೀಲಾವತಿ ಅವರಿಗೆ ಮದುವೆಯಾಗಿತ್ತು. ಅವರ ಪತಿ ಮಹಲಿಂಗ ಭಾಗವತರ್ ಎಂದು ಚೆನ್ನೈನಲ್ಲಿ ಆಸ್ತಿ ಖರೀದಿ ವೇಳೆ ಹೆಸರನ್ನು ನಮೂದಿಸಲಾಗಿತ್ತು ಅಂತ ಮೆಹೋ ಹೇಳಿದ್ದಾರೆ. ಆಸ್ತಿ ಪತ್ರದಲ್ಲಿ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ ಅಂತ ಬರೆಯಲಾಗಿದೆಯಂತೆ. ಆಸ್ತಿ ದಾಖಲೆಗೆ ಸಂಬಂಧಿಸಿದ ಫೋಟೋ ಒಂದು ವೈರಲ್​ ಆಗಿದೆ.

Vinod Raj Property

ವಿನೋದ್ ರಾಜ್ ಪುತ್ರ

ಅಚ್ಚರಿಯ ಸಂಗತಿ ಏನೆಂದರೆ, ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರಿಗೂ ಮದುವೆಯಾಗಿದೆಯಂತೆ. ವಿನೋದ್ ರಾಜ್ ಅವರ ಪುತ್ರ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ ಎಂದು ಪ್ರಕಾಶ್ ರಾಜ್ ಮೆಹೋ ವಾದಿಸಿದ್ದಾರೆ. ಅದಕ್ಕೆ ಪೂರಕವಾದ ಅಂಕಪಟ್ಟಿಯ ಫೋಟೋ ಸಹ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂಕಪಟ್ಟಿಯಲ್ಲಿ ವಿನೋದ್​ ರಾಜ್​ ಎಂ.ಎಲ್​. ಎಂದು ಬರೆಯಲಾಗಿದೆ.

Vinod Raj Son

ಅಂದಹಾಗೆ ಪ್ರಕಾಶ್​ ರಾಜ್​ ಮೆಹು ಅವರು ಡಿಎನ್ಎ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದ‌ರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net