

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಇತ್ತೀಚಿನ ಚಿತ್ರಗಳಲ್ಲಿ ನಟ ವಿನೋದ್ ಪ್ರಭಾಕರ್ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. "ಲಂಕಾಸುರ', "ಮಾದೇವ' ಚಿತ್ರಗಳಲ್ಲಿ ರಾ, ರಗಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವುಗಳ ಜತೆಗೆ ವರಮಹಾಲಕ್ಷಿ$್ಮ ಹಬ್ಬದಂದು "ಫೈಟರ್' ಚಿತ್ರದ ವಿನೋದ್ ಪ್ರಭಾಕರ್ ಲುಕ್ ರಿವೀಲ್ ಆಗಿದೆ.
ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ ಸ್ಟೈಲಿಶ್ ಗ್ಯಾಂಗ್ಸ್ಟರ್ನಂತೆ ಮಿಂಚುತ್ತಿದ್ದಾರೆ. ಪೋಸ್ಟರ್ ಬೆನ್ನಲ್ಲೇ ಭಾನುವಾರ (ಆ. 27) ಚಿತ್ರತಂಡ ಟೀಸರ್ ರಿಲೀಸ್ ಮಾಡಲು ಸಿದ್ಧತೆ ನಡೆಸಿದೆ. "ಇದುವರೆಗೆ ಪೊಲೀಸ್, ಲವರ್ಬಾಯ್ ಆಗಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ "ಫೈಟರ್'ನಲ್ಲಿ ವಿಶೇಷ ರೀತಿಯ ಮ್ಯಾನರಿಸಂ ಮತ್ತು ಗೆಟಪ್ನಲ್ಲಿ ಇರಲಿದ್ದಾರೆ' ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಉಮೇಶ್.
ಈ ಹಿಂದೆ "ಕೃಷ್ಣನ್ ಮ್ಯಾರೇಜ್ ಸ್ಟೋರಿ' ನಿರ್ದೇಶಿಸಿದ್ದ ಉಮೇಶ್, "ಫೈಟರ್'ಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್&ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ, ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನವಿರಲಿದೆ.