ಅಭಿಮಾನಿಗಳ ತಲೆಗೆ ಹುಳ ಬಿಟ್ಟ 'ವಿಕ್ರಾಂತ್ ರೋಣ' ಟ್ರೇಲರ್‌; ಸುದೀಪ್‌ ಹೀರೋನಾ? ವಿಲನ್ನಾ!

vikrant rona
Published on

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್‌ ರೋಣ ಚಿತ್ರದ ಟ್ರೇಲರ್‌ ಇಂದು ರಿಲೀಸ್‌ ಆಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ ಟ್ರೇಲರ್‌ ನೋಡಿದ ಪ್ರತಿಯೊಬ್ಬರೂ ಫಿದಾ ಆಗಿದ್ದಾರೆ.

ಇದೀಗ ಈ ಟ್ರೇಲರ್ ನೋಡಿದ ಜನರಿಗೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಆಗಿದ್ದೇನೋ ಸತ್ಯ. ಆದರೆ ಅದರ ಜತೆಗೆ ಸಿನಿಮಾದಲ್ಲಿರುವ ಟ್ವಿಸ್ಟ್‌ಗಳ ಬಗ್ಗೆ ತಲೆಗೆ ಹುಳ ಬಿಟ್ಟಿದೆ.

3ಡಿ ಅಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ ಆಗಲಿದೆ. ಆದರೆ ಇಂದು ರಿಲೀಸ್‌ ಆಗಿರುವ ಈ ಟ್ರೇಲರ್ ನೋಡಿದ ಪ್ರತಿಯೊಬ್ಬರಲ್ಲೂ ಕೆಲವು ಪ್ರಶ್ನೆಗಳು ಮೂಡಿವೆ. ಸುದೀಪ್ ವಿಕ್ರಾಂತ್ ರೋಣ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಅನುಮಾನ ಮೂಡಿದೆ.

ಈಗಾಗಲೇ ಟ್ರೇಲರ್‌ನಲ್ಲಿ ಸುದೀಪ್ ಪಾತ್ರದ ಪರಿಚಯವನ್ನೇನೋ ಮಾಡಲಾಗಿದೆ. ಆದರೆ ಕೊನೆಯಲ್ಲಿ ಕೊಡಲಾದ ಟ್ವಿಸ್ಟ್ ಕಿಚ್ಚನ ಪಾತ್ರದ ಬಗ್ಗೆ ಹೊಸ ಕುತೂಹಲ ಹುಟ್ಟಿಕೊಳ್ಳುವಂತೆ ಮಾಡಿದೆ. ಚಿತ್ರದ ಟ್ರೇಲರ್‌ ನೋಡಿದ ಎಲ್ಲರ ತಲೆಯಲ್ಲೂ ಹುಳ ಬಿಟ್ಟಂತಾಗಿದೆ. ವಿಕ್ರಾಂತ್‌ ರೋಣ ಒಂದೇ ಪಾತ್ರವಾ? ಅಥವಾ ವಿಕ್ರಾಂತ್ ಮತ್ತು ರೋಣ ಎರಡೂ ಬೇರೆ ಬೇರೆ ಪಾತ್ರಗಳಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಹಾಗೊಂದು ವೇಳೆ ವಿಕ್ರಾಂತ್‌, ರೋಣ ಇಬ್ಬರೂ ಬೇರೆ ಬೇರೆಯಾಗಿದ್ದರೆ ಇವರಿಬ್ಬರಲ್ಲಿ ವಿಲನ್ ಯಾರು? ಹೀರೋ ಯಾರು? ಎಂಬ ಪ್ರಶ್ನೆ ಸಹ ಈ ಟ್ರೇಲರ್‌ ನೋಡಿದವರಲ್ಲಿ ಮೂಡುತ್ತಿದೆ. ಆದರೆ ಪ್ರೇಕ್ಷಕರ ಈ ಎಲ್ಲಾ ಕುತೂಹಲಕ್ಕೂ ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಲೇ ಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net