

ಬೆಂಗಳೂರು: ಸಿನಿಮಾ ತಾರೆಯರು ಆಗಾಗ ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರಿಗೆ ಅಚ್ಚರಿ ನೀಡುತ್ತಿರುತ್ತಾರೆ. ಈಗ ‘ಚಿನ್ನಾರಿ ಮುತ್ತ’ ವಿಜಯ ರಾಘವೇಂದ್ರ, ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅತಿಥಿಯಾಗಿ ಆಗಮಿಸಿದ್ದಾರೆ. ಕಳೆದ ಶುಕ್ರವಾರವಷ್ಟೇ ವಿಜಯ್ ರಾಘವೇಂದ್ರ ನಾಯಕತ್ವದ ‘ಮಾಲ್ಗುಡಿ ಡೇಸ್’ ಸಿನಿಮಾ ತೆರೆಕಂಡಿದೆ.
ಅದರ ಪ್ರಚಾರಾರ್ಥವಾಗಿ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್ನಲ್ಲಿ ಅಮೂಲ್ಯಳಿಗೆ ವಿಜಯ್ರಾಘವೇಂದ್ರ ಎಂದರೆ ಅಚ್ಚುಮೆಚ್ಚು. ಅದನ್ನು ಗಮನದಲ್ಲಿಟ್ಟುಕೊಂಡ ವೇದಾಂತ್, ಅವರನ್ನು ಮನೆಗೆ ಸ್ವಾಗತಿಸುತ್ತಾನೆ. ಇದು ಅಮೂಲ್ಯ ಮೊಗದಲ್ಲೂ ಸಂತೋಷ ಉಕ್ಕುವಂತೆ ಮಾಡುತ್ತದೆ. ಮತ್ತೇನೆಲ್ಲ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ ಇಂದು ಮತ್ತು ನಾಳೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್ಡಿಯಲ್ಲಿ ಪ್ರಸಾರವಾಗುವ ಎರಡು ಸಂಚಿಕೆಗಳನ್ನು ವೀಕ್ಷಿಸಬೇಕು.
ಅಂದಹಾಗೆ, ವಿಜಯ್ರಾಘವೇಂದ್ರ ‘ಗಟ್ಟಿಮೇಳ’ ಧಾರಾವಾಹಿ ಅಭಿಮಾನಿ. ಸೀರಿಯಲ್ ಶುರುವಾದಾಗಿನಿಂದಲೂ ವೀಕ್ಷಿಸುತ್ತ ಬಂದಿದ್ದಾರಂತೆ. ಇತ್ತ ಸೀರಿಯಲ್ನಲ್ಲಿ ಸಣ್ಣ ಪಾತ್ರ ನಿರ್ವಹಿಸಿರುವುದು ಜೀ ಕನ್ನಡ ಬಳಗ ಮತ್ತು ಧಾರಾವಾಹಿ ತಂಡ ಸಂತಸದಲ್ಲಿದೆ.