ವಿಜಯ್​ ಮಲ್ಯ ಕುರಿತ ವೆಬ್​ಸಿರೀಸ್​ಗೆ ನಡೆದಿದೆ ತಯಾರಿ

malya
Published on

ಕಾದಂಬರಿಯನ್ನು ಆಧರಿಸಿ ಈಗಾಗಲೇ ಭಾರತೀಯ ಸಿನಿಮಾರಂಗದಲ್ಲಿ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು, ವೆಬ್​ಸಿರೀಸ್​ಗಳು ನಿರ್ಮಾಣವಾಗಿವೆ. ಓಟಿಟಿ ವೇದಿಕೆಯಲ್ಲಿ ಅಂತಹ ಸರಕುಗಳಿಗೆ ಬೆಲೆ ಹೆಚ್ಚಿರುವುದರಿಂದ, ಸಿನಿಮಾ ಮೇಕರ್​ಗಳು ವೆಬ್​ ಸರಣಿಯತ್ತ ಗಮನ ಹರಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಹೊಸ ಕಥೆಯೊಂದು ಸೇರ್ಪಡೆಯಾಗುತ್ತಿದೆ. ಅದೇ ಉದ್ಯಮಿ ವಿಜಯ್ ಮಲ್ಯ ಕಥೆ!

ಹೌದು, ಈಗಾಗಲೇ ವಿಜಯ್​ ಮಲ್ಯ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಮನಿ ಲಾಂಡರಿಂಗ್​ ಸೇರಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇದೀಗ ಈ ವ್ಯಕ್ತಿಯ ವಿರುದ್ಧ ಬಾಲಿವುಡ್​ನಲ್ಲಿ ವೆಬ್​ಸರಣಿ ಮಾಡಲು ಪ್ಲಾನ್​ ನಡೆಯುತ್ತಿದೆ.

ಈಗಾಗಲೇ ಕೆ. ಗಿರಿಪ್ರಕಾಶ್​ 'ದಿ ವಿಜಯ್​ ಮಲ್ಯ ಸ್ಟೋರಿ' ಹೆಸರಿನ ಪುಸ್ತಕ ಬರೆದಿದ್ದರು. ಪೆಂಗ್ವಿನ್​ ಇಂಡಿಯಾ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಮುದ್ರಿಸಿತ್ತು. ಇದೀಗ ಅದೇ ಪುಸ್ತಕದಲ್ಲಿನ ಅಂಶಗಳನ್ನು ಆಧರಿಸಿ ವೆಬ್​ ಸಿರೀಸ್​ ನಿರ್ಮಾಣವಾಗಲಿದೆಯಂತೆ. ಆಲ್​ಮೈಟ್ ಮೋಷನ್​ ಪಿಕ್ಚರ್ಸ್ ಈ ವೆಬ್​ ಸಿರೀಸ್​ಗೆ ಬಂಡವಾಳ ಹೂಡಲಿದೆ.

ಇನ್ನು ಕೆಲ ದಿನಗಳಲ್ಲಿ ನಿರ್ದೇಶಕರ್ಯಾರು? ಪಾತ್ರಧಾರಿಗಳು ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net