Vijay Varma ಜೀವನದಲ್ಲಿ ಹೊಸ ಪ್ರೀತಿ ಚಿಗುರು?; 'ಝಲ್ಲಿ' ಈವೆಂಟ್​ನಲ್ಲಿ ಶಿಳ್ಳೆ ಹೊಡೆದು, ಗಾಯಕಿ ಆಲಿಯಾ ಖುರೇಷಿಗೆ ಫುಲ್​ ಎಂಕ್ರೇಜ್

Vijay Varma ಜೀವನದಲ್ಲಿ ಹೊಸ ಪ್ರೀತಿ ಚಿಗುರು?; 'ಝಲ್ಲಿ' ಈವೆಂಟ್​ನಲ್ಲಿ ಶಿಳ್ಳೆ ಹೊಡೆದು, ಗಾಯಕಿ ಆಲಿಯಾ ಖುರೇಷಿಗೆ ಫುಲ್​ ಎಂಕ್ರೇಜ್
Published on: 
  • ಝಲ್ಲಿ ಪ್ರಾಜೆಕ್ಟ್ ಲಾಂಚ್​ ಈವೆಂಟ್​ನಲ್ಲಿ ಆಲಿಯಾ ಖುರೇಷಿ -ವಿಜಯ್​​ ವರ್ಮಾ.

  • ಆಲಿಯಾಗೆ ಶಿಳ್ಳೆ ಹೊಡೆದು ಎಂಕ್ರೇಜ್ ಮಾಡಿದ ನಟ, ಡೇಟಿಂಗ್​ ವದಂತಿಗೆ ಮತ್ತಷ್ಟು ಪುಷ್ಟಿ.

  • ತಮನ್ನಾ ನಂತರ ವಿಜಯ್​ ವರ್ಮಾರ ಬದುಕಿನಲ್ಲಿ ಹೊಸ ಪ್ರೀತಿ.

Vijay Varma Rumoured Girlfriend Aaliyah Qureishi At Mumbai: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಫಾತಿಮಾ ಸನಾ ಶೇಖ್​​ ನಂತರ ನಟ ವಿಜಯ್​ ವರ್ಮಾ.. ಮತ್ತೊಮ್ಮೆ ಪ್ರೀತಿ, ಪ್ರೇಮ ಹಾಗೂ ಡೇಟಿಂಗ್​ ವದಂತಿಗಳ ಸುಳಿಯಲ್ಲಿ ಸಿಲುಕಿದ್ದಾರೆ. 'ಝಲ್ಲಿ' ಮ್ಯೂಸಿಕ್​ ಪ್ರಾಜೆಕ್ಟ್​ ಲಾಂಚ್​ ಈವೆಂಟ್​ನಲ್ಲಿ ಭಾಗಿಯಾಗಿದ್ದ ಅವರು, ಗಾಯಕಿ ಮತ್ತು ನಟಿ ಆಲಿಯಾ ಖುರೇಷಿಗೆ ಶಿಳ್ಳೆ ಹೊಡೆದು ಬೆಂಬಲ ಕೊಟ್ಟಿದ್ದಾರೆ. ಅಲ್ಲದೇ ಕಣ್ ಕಣ್ಣ ಸಲುಗೆಯಲ್ಲೇ ಇಬ್ಬರು ಬೆರೆತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತಷ್ಟು ಊಹಾಪೋಹಾಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಆಲಿಯಾ ಖುರೇಷಿ ಅವರು ತಮ್ಮ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಇದ್ದಾರೆ ಎಂದು ಹೇಳಿದ್ದರು. ಆದರೆ, ಆ ವ್ಯಕ್ತಿ ಯಾರು ಎಂದು ಮಾತ್ರ ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಮುಂಬೈನಲ್ಲಿ ನಡೆದ ಝಲ್ಲಿ ಪ್ರಾಜೆಕ್ಟ್​ ಲಾಂಚ್​​ ಈವೆಂಟ್​ನಲ್ಲಿ ವಿಜಯ್​ ವರ್ಮಾ ಅವರನ್ನು ಕಂಡು, ಆಲಿಯಾ ನಾಚಿ ನೀರಾದ ಪರಿಯು, ಇವರೇ ಅವರ ವಿಶೇಷ ವ್ಯಕ್ತಿ ಇರಬಹುದು ಎನ್ನವ ಚರ್ಚೆಗೆ ಕಾರಣವಾಗಿದೆ.

ವಿಜಯ್​ ವರ್ಮಾ ಮತ್ತು ಆಲಿಯಾ ಡೇಟಿಂಗ್​

ಆಲಿಯಾ ಖುರೇಷಿ ಮತ್ತು ವಿಜಯ್​​ ವರ್ಮಾ ಅವರ ಡೇಟಿಂಗ್​ ಬಗ್ಗೆ ವದಂತಿಗಳು 2026ರ ಆರಂಭದಲ್ಲಿ ಹರಿದಾಡಿತು. ಆ ಬೆನ್ನಲ್ಲೇ ಇಬ್ಬರು ಮ್ಯೂಸಿಕ್​ ಈವೆಂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್​ ವರ್ಮಾ ಬ್ಲೂ ಶರ್ಟ್​​ ತೊಟ್ಟು, ಕತ್ತಿಗೆ ಚೈನ್​, ಅದಕ್ಕೊಪ್ಪುವ ವೈಟ್​ ಬ್ಯಾಗಿ ಪ್ಯಾಂಟ್​ನಲ್ಲಿ ಹ್ಯಾಂಡ್​ಸಮ್​ನಂತೆ ಮಿಂಚಿದ್ದಾರೆ. ಇನ್ನೂ ಆಲಿಯಾ ಖುರೇಷಿ ಡೆನಿಮ್​ ಶಾರ್ಟ್​​​​ ಫ್ರಾಕ್​​ ಸೊಂಟಕ್ಕೆ ರೇಷ್ಮೆ ಬಣ್ಣದ ಬೆಲ್ಟ್​, ಹರಿಬಿಟ್ಟ ಕೂದಲಿನೊಂದಿಗೆ ಸಾಕಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮೈಕ್​ ಹಿಡಿದು ಆಲಿಯಾ ಖರೇಷಿ ಹಾಡು ಮುಗಿಸಿದ ನಂತರ ವಿಜಯ್​ ವರ್ಮಾ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂತಸ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ನಟಿಯ ನೋಟವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಅವರ ಈ ಉತ್ಸಾಹವು ಆಲಿಯಾರ ಕೆನ್ನೆ ಕೆಂಪಾಗುವಂತೆ ಮಾಡಿತ್ತು.

ಇವರಿಬ್ಬರು ಒಟ್ಟಾಗಿ ಹಲವು ಬಾರಿ ಕಾಣಿಸಿಕೊಂಡಿರುವ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿದೆ, ಆದರೆ ಈ ಬಗ್ಗೆ ನಟ ವಿಜಯ್​ ವರ್ಮಾ ಆಗಲಿ, ನಟಿ ಆಲಿಯಾ ಖುರೇಷಿ ಆಗಲಿ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಇವರಿಬ್ಬರು ಮದುವೆಯಾಗುತ್ತಾರಾ? ನಿಜಕ್ಕೂ ಇಬ್ಬರ ಮಧ್ಯೆ ಪ್ರೀತಿ ಇದ್ಯಾ ಎನ್ನುವುದು ವದಂತಿಯಾಗಿಯೇ ಉಳಿದಿದೆ.

ಯಾರು ಈ ಆಲಿಯಾ ಖುರೇಷಿ

ಆಲಿಯಾ ಖುರೇಷಿ ಗಾಯಕಿ, ನಟಿ ಗೀತರಚನೆಗಾರ್ತಿ. ಝಲ್ಲಿ ಎನ್ನುವುದು ಇವರ ಸ್ಟೇಜ್​ ಪರ್ಫಾಮೆನ್ಸ್​ನಿಂದ ಫೇಮಸ್ ಆಗಿದ್ದಾರೆ. ಜವಾನ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಸದ್ಯ ಅಜಾದ್​ ಗ್ಯಾಂಗ್​ ಸಿನಿಮಾದಲ್ಲಿ ನಿಟಿದರು. ನಟನೆ ಹಾಗೂ ಗಾಯನದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.

ತಮನ್ನಾ ಜೊತೆಗೆ ಡೇಟಿಂಗ್​

ವಿಜಯ್​ ವರ್ಮಾ ಅವರು ಲಸ್ಟ್​ ಸ್ಟೋರಿಸ್​ ಮೂಲಕ ತಮನ್ನಾ ಭಾಟಿಯಾ ಅವರೊಂದಿಗೆ ಡೇಟಿಂಗ್​ನಲ್ಲಿದ್ದರು.ಇಬ್ಬರು ಆದಷ್ಟು ಬೇಗನೆ ಮದುವೆಯಾಗುತ್ತಾರೆ ಎನ್ನುವ ಮಾಹಿತಿಯೂ ಇತ್ತು. ಆದರೆ, ಆ ಬೆನ್ನಲ್ಲೇ ಅವರ ಫಾತಿಮಾ ಸನಾ ಶೇಖ್​ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಆದರೆ, ಈ ಬಗ್ಗೆ ಮಾತನಾಡಿದ್ದ ಫಾತಿಮಾ ಅವರು, ವಿಜಯ್​ ನನ್ನ ಗೆಳೆಯನಷ್ಟೇ ಎಂದು ಸ್ಪಷ್ಟನೆ ಕೊಟ್ಟಿದ್ದರು. ಏಪ್ರಿಲ್​ನಲ್ಲಿ ವಿಜಯ್​ ವರ್ಮಾರ ಮಟ್ಕಾ ಕಿಂಗ್ ಸಿನಿಮಾ ಸಾಕಷ್ಟು ಹೆಸರು ಮಾಡುತ್ತಿತ್ತು, ಅದೇ ವೇಳೆ ಅವರು ಗಾಯಕಿ ಮತ್ತು ನಟಿ ಆಲಿಯಾ ಖುರೇಷಿ ಜೊತೆಗೆ ಕಾಣಿಸಿಕೊಂಡಿರುವುದು ವೈರಲ್ ಆಗಿತ್ತು. ಇಬ್ಬರು ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದು, ಆಕೆಯೊಂದಿಗೆ ತೆಗೆಸಿಕೊಂಡ ಫೋಟೋಗಳು ಹಲವಾರು ವದಂತಿಗೆ ಪುಷ್ಟಿ ಕೊಟ್ಟಿತ್ತು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net