'Rashmika ನಿತ್ಯ 10-15 ಸಲ ಐ ಲವ್ ಯೂ ಹೇಳ್ತಾರೆ'; ರಿಲೇಷನ್‌ಶಿಪ್ ಗುಟ್ಟು ಬಿಚ್ಚಿಟ್ಟ Vijay Deverakonda

'Rashmika ನಿತ್ಯ 10-15 ಸಲ ಐ ಲವ್ ಯೂ ಹೇಳ್ತಾರೆ'; ರಿಲೇಷನ್‌ಶಿಪ್ ಗುಟ್ಟು ಬಿಚ್ಚಿಟ್ಟ Vijay Deverakonda
Published on: 
  • ಅಕ್ಟೋಬರ್ 16ರಂದು ವಿಜಯ್ ಮತ್ತು ರಶ್ಮಿಕಾ ಅಭಿನಯದ ರಣಬಾಲಿ ರಿಲೀಸ್

  • ದಾಂಪತ್ಯ ಜೀವನ ಹಾಗೂ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ ಸ್ಟಾರ್ ಜೋಡಿ

  • ಸಂಬಂಧ, ಪ್ರೀತಿ ಉಳಿಸಿಕೊಳ್ಳಲು ಬ್ಯುಸಿ ಶೆಡ್ಯೂಲ್​ನಲ್ಲಿಯೂ ಕಾಳಜಿ ಮುಖ್ಯ ಎಂದ ನ್ಯಾಶನಲ್ ಕ್ರಶ್

Vijay Deverakonda, Rashmika Mandanna interview  : ಗೀತ-ಗೋವಿಂದಂ, ಕಾಮ್ರೆಡ್​ ನಂತ್ರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್​ನಲ್ಲಿ ರಣಬಾಲಿ ಸಿನಿಮಾ ಅಕ್ಟೋಬರ್​16ರಂದು ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈ ಹಿನ್ನೆಲೆ ಪ್ರಚಾರ ಕಾರ್ಯಕ್ರಮಗಳು ಸಹ ಭರಪೂರ ನಡೆಯುತ್ತಿದೆ. ಸಿನಿಮಾದ ಬಿಡುಗಡೆಗೂ ಹಲವಾರು ಸಂದರ್ಶನದಲ್ಲಿ ಭಾಗಿಯಾಗುತ್ತಿರುವ ಜೋಡಿ ತಮ್ಮ ದಾಂಪತ್ಯ ಜೀವನ ಹಾಗೂ ಸಂಬಂಧ ಗಟ್ಟಿಯಾಗಿಟ್ಟುಕೊಳ್ಳುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಭಾರತೀಯ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಮದಾದ 1876-78ರ ಅವಧಿಯ ಭೀಕರ ಮದ್ರಾಸ್, ಬ್ರಿಟಿಷ್​ ಆಳ್ವಿಕೆಯ ಸುತ್ತ ಸಿನಿಮಾ ಕತೆಯನ್ನು ರಾಹುಲ್ ಸಂಕೃತ್ಯನ್ ಹೆಣೆದಿದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಅರ್ನಾಲ್ಡ್ ವೋಸ್ಲೂ ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಖರ್ ಗುಪ್ತಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನ ಹಾಗೂ ಪ್ರೀತಿಯ ಬಗ್ಗೆ ಹಾಗೂ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಪ್ರೀತಿಸುವವರಿಗೆ ತೋರುವ ಸಣ್ಣಪುಟ್ಟ ಕಾಳಜಿ ಎಷ್ಟೆಲ್ಲ ಸಹಾಯ ಮಾಡುತ್ತದೆ ಎನ್ನುವ ಬಗ್ಗೆ ಟಾಲಿವುಡ್ ಸ್ಟಾರ್ ಕಪಲ್ಸ್ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ ಮಾತನಾಡಿದ್ದಾರೆ.

ಪ್ರೀತಿ, ಮದುವೆ ಬ್ಯುಸಿ ಲೈಫ್​ ಬಗ್ಗೆ ರಶ್ಮಿಕಾ ಹೇಳಿದ್ದಿಷ್ಟು

'ಮದುವೆಯಾದ ನಂತರ ನಾವು ಗುಡ್​ಮಾರ್ನಿಂಗ್​ ವಿಶಸ್, ಊಟ ತಿಂಡಿ ಇದನ್ನೆಲ್ಲ ವಿಚಾರಿಸಿಕೊಳ್ಳೋದನ್ನೇ ಬಿಟ್ಟು ಬಿಡ್ತೇವೆ. ಯಾಕೆಂದರೆ ಅವರು ಇನ್ನೇನು ಜೊತೆಯಲ್ಲಿದ್ದಾರಾಲ್ಲ. ನಮಗೆ ಹೆಚ್ಚು ಪ್ರೀತಿ ಇದೆಯಲ್ಲ ಎಂದು. ಆದರೆ, ಕೇವಲ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಎಲ್ಲವೂ ಸರಿಯಾಗಿರುತ್ತದೆ ಎಂದ ಮಾತ್ರಕ್ಕೆ ಒಂದು ಸಂಬಂಧ ಗಟ್ಟಿಯಾಗಿ ಕೊನೆಗಳಿಗೆಯವರೆಗೂ ಉಳಿಯೋದಿಲ್ಲ. ಪ್ರತಿದಿನವೂ ಇಬ್ಬರೂ ಸಣ್ಣಪುಟ್ಟ ಪ್ರಯತ್ನಗಳನ್ನು ಮಾಡಿಕೊಳ್ಳಬೇಕು. ಮಾತನಾಡಬೇಕು ಆಗ ಮಾತ್ರ ಸಂಬಂಧ ಉಳಿದುಕೊಳ್ಳಲು ಸಾಧ್ಯ' ಎಂದು ಹೇಳಿದರು.

'ಸಂಬಂಧ ಅಥವಾ ಮದುವೆಯ ಎಷ್ಟೇ ಆಳವಾಗಿದೆ. ಜೊತೆಯಲ್ಲಿದ್ದರು ಸಹ. ನಾವು ನಮ್ಮ ಪ್ರೀತಿ ಪಾತ್ರರ ಬಗ್ಗೆ ಸಣ್ಣ ಕಾಳಜಿ ವಹಿಸಬೇಕು. ಅದು ಮಾಡಲೇಬೇಕು ಅಂತಲ್ಲ. ಮಾಡಬೇಕು ಎಂದೆನಿಸಬೇಕು. ಅದೇ ನಿಜವಾದ ಪ್ರೀತಿ' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಜಯ್​ ದನಿಗೂಡಿಸಿದ್ದು ಹೀಗೆ

ಈ ವೇಳೆ ಮಾತನಾಡಿದ ವಿಜಯ್​ ಅವರು, 'ಹೌದು ಆಕೆ ಮೊದಲಿಂದಲೂ ಸಂಬಂಧ ಎನ್ನುವ ವಿಚಾರದಲ್ಲೆ ಮೆಚ್ಯೂರ್​ ಆಗಿ ವರ್ತಿಸುತ್ತಾಳೆ. ಆಕೆ ಮಾತನಾಡುವ ರೀತಿನೇ ಹಾಗಿದೆ. ನನ್ನ ಬಳಿ ಪ್ರತಿದಿನ ಕನಿಷ್ಠ 10 ರಿಂದ 15 ಸಲ 'ಐ ಲವ್ ಯೂ' ಎನ್ನುತ್ತಾಳೆ. ಮನಸ್ಸಿನಲ್ಲಿ ಎಷ್ಟೇ ಪ್ರೀತಿ ಇದ್ದರೂ ಪರವಾಗಿಲ್ಲ, ಅದನ್ನು ಬಾಯಿಂದ ವ್ಯಕ್ತಪಡಿಸುವುದು ಬಹಳ ಮುಖ್ಯ ಎನ್ನುವುದು ಆಕೆಯ ನಿಲುವು. ಕೆಲವೊಮ್ಮೆ ಸಂಬಂಧವನ್ನು ಜೀವಂತವಾಗಿಡುವುದು ನಿಜಕ್ಕೂ ಇಂತಹ ಸಣ್ಣಪುಟ್ಟ ವಿಷಯಗಳೇ' ಎಂದು ಹೇಳಿದರು.

'ನಮ್ಮ ಬ್ಯುಸಿ ಲೈಫ್​ನಲ್ಲಿ ನಾವು ಪ್ರೀತಿ ಪಾತ್ರರನ್ನು ಕೇರ್ ಮಾಡದೆ ಸುಮ್ಮನಾಗಿಬಿಡ್ತೇವೆ. ಅವರು ನಮ್ಮೊಂದಿಗೆ ಇರುತ್ತಾರೆ. ಇನ್ನು ಹೇಳುವುದು, ಕೇರ್ ಏತಕ್ಕೆ ಎಂದುಕೊಳ್ಳಬಾರದು ಇದನ್ನು ರಶ್ಮಿಕಾ ನನಗೆ ಹೇಳಿಕೊಟ್ಟಿದ್ದಾರೆ. ನಾನಾಗಿದ್ದರೆ ನನ್ನ ಪಾಡಿಗೆ ಬ್ಯುಸಿ ಆಗಿರುತ್ತಿದ್ದೆ, ಆದರೆ ಆಕೆಯೇ ನನ್ನನ್ನು ಪ್ರೀತಿಯನ್ನು ವ್ಯಕ್ತಪಡಿಸುವಂತೆ ಮಾಡಿದ್ದಾಳೆ' ಎಂದು ವಿಜಯ್​ ದನಿಗೂಡಿಸಿದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net