ಸುದ್ದಿ ಮಾಧ್ಯಮಗಳನ್ನು 'ನಾನ್​ಸೆನ್ಸ್' ಎಂದು ಬೈಯ್ಯುತ್ತಲೇ ಮದುವೆ ಬಗ್ಗೆ ವಿಜಯ್ ಹೇಳಿದ್ದೇನು?

Published on
ತೆಲುಗಿನ ರೌಡಿ, ಸೆಲ್ಫ್ ಮೇಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್, ಕನ್ನಡದ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರ ಡೇಟಿಂಗ್, ಲವ್ ಎಂಬ ಸುದ್ದಿಗಳು ಬರೋಬ್ಬರಿ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿವೆ. ಇನ್ನು, ರಶ್ಮಿಕಾ ಹಾಗೂ ವಿಜಯ್ ಅವರು ಮುಂಬೈಗೆ ಶಿಫ್ಟ್ ಆದ ನಂತರ ಒಟ್ಟೊಟ್ಟಿಗೆ ಆಚೆ ಕಾಣಿಸಿಕೊಳ್ಳುವುದು ಸಹ ಅಭಿಮಾನಿಗಳು ಮತ್ತು ಎಲ್ಲರೂ ನೋಡುತ್ತಲೆ ಇದ್ದಾರೆ. ಇದೇ ಕಾರಣಕ್ಕೆ, ಇವರಿಬ್ಬರು ಈ ವರ್ಷವೇ ಮದುವೆ ಆಗಲಿದ್ದಾರೆ ಎಂಬ ಗಾಳಿ ಸುದ್ದಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ಹೌದು, ಈ ಜೋಡಿ ಈಗಾಗಲೇ ಇಬ್ಬರೂ ಲಿವಿನ್‌ ರಿಲೇಶನ್‌ನಲ್ಲಿದ್ದಾರೆಂದು ಹೀಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿ, ಈ ಗಾಳಿ ಸುದ್ದಿಗಳಿಗೆ ನಟ ವಿಜಯ್ ದೇವರಕೊಂಡ ಅವರ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕೊಟ್ಟಿದ್ದಾರೆ. ''ಮಾಮೂಲಿನಂತೆ ಇದು ಸಹ ನಾನ್​ಸೆನ್ಸ್'' ಎಂದು ಟ್ವೀಟ್ ಮಾಡಿದ್ದಾರೆ ರೌಡಿ. ಇನ್ನು, ''ಡೋಂಟ್ ವಿ 'ಲವ್ ದ' ನ್ಯೂಸ್'' ಎಂದು ಸಹ ಬರೆದಿದ್ದಾರೆ. ಈ ಮೂಲಕ ಗಾಳಿ ಸುದ್ದಿ ಹಬ್ಬಿಸಿರುವ ಸುದ್ದಿ ಸಂಸ್ಥೆಗಳಿಗೆ ಪರೋಕ್ಷವಾಗಿ ನಟ ವಿಜಯ್ ಬೈದಂತಿದೆ. ಸುದ್ದಿ ಮಾಧ್ಯಮಗಳಿಗೆ ನೀವು 'ನಾನ್​ಸೆನ್ಸ್' ಎಂದು ವಿಜಯ್ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net