ಅಲ್ಲೂ ನಾಯಕಿ, ಇಲ್ಲೂ ನಾಯಕಿ! "ವಿದ್ಯಾಪತಿ' ಚಿತ್ರದಲ್ಲಿ ಹೀರೋಯಿನ್​ ಪಾತ್ರದಲ್ಲಿ ಮಲೈಕಾ

123
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಹಿಟ್ಲರ್​ ಕಲ್ಯಾಣ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮನೆಮಾತಾದ ಮಲೈಕಾ ವಸುಪಾಲ್​, ಕಳೆದ ವರ್ಷ "ಉಪಾಧ್ಯಕ್ಷ' ಚಿಕ್ಕಣ್ಣನಿಗೆ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದು ಗೊತ್ತಿದೆ. ಆ ಬಳಿಕ "ಇಕ್ಕಟ್​' ನಾಗಭೂಷಣ್​ಗೆ ಜೋಡಿಯಾಗಿ "ವಿದ್ಯಾಪತಿ' ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಫಸ್ಟ್​ ಲುಕ್​ ಬಿಡುಗಡೆ ಮಾಡಿದೆ.

ನಾಯಕಿ ಮಲೈಕಾ ಚಿತ್ರದಲ್ಲೂ ಸೂಪರ್​ಸ್ಟಾರ್​ ವಿದ್ಯಾ ಎಂಬ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಔಟ್​ ಆ್ಯಂಡ್​ ಔಟ್​ ಕಾಮಿಡಿ ಚಿತ್ರವಾಗಿದ್ದು ಜತೆಗೆ ರೊಮ್ಯಾನ್ಸ್​, ಆ್ಯಕ್ಷನ್​ ಅಂಶಗಳೂ ಇರಲಿವೆ. ಚಿತ್ರಕ್ಕೆ ಇಶಾಂ ಮತ್ತು ಹಸೀನ್​ ಖಾನ್​ ಆ್ಯಕ್ಷನ್​&ಕಟ್​ ಹೇಳುತ್ತಿದ್ದು, ಕರಾಟೆಪಟು ಪಾತ್ರದಲ್ಲಿ ನಾಗಭೂಷಣ್​ ಮತ್ತು ಕರಾಟೆ ಮಾಸ್ಟರ್​ ಆಗಿ ರಂಗಾಯಣ ರಘು ನಟಿಸುತ್ತಿದ್ದಾರೆ.

ವಿಲನ್​ ಆಗಿ "ಕೆಜಿಎ್​' ಗರುಡಾ ರಾಮ್​ ನಟಿಸುತ್ತಿದ್ದು, ಕಾರ್ತಿಕ್​ ರಾವ್​ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ಲವಿತ್​ ಛಾಯಾಗ್ರಹಣ, ಮುರಳಿ ನೃತ್ಯ ನಿರ್ದೇಶನ, ಅರ್ಜುನ್​ ಮಾಸ್ಟರ್​ ಸಾಹಸ ಚಿತ್ರಕ್ಕಿರಲಿದೆ. ಇದೇ ಏ.10ರಂದು "ವಿದ್ಯಾಪತಿ' ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net