ಶಕುಂತಲಾ ದೇವಿ ಅಮೆಜಾನ್​​ಗೆ ಯಾವಾಗ ಬರ್ತಾರೆ ಗೊತ್ತ?

119190-zmcigcarpp-1557298559
Published on

ಈಗಾಗಲೇ ಕರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದೆ. ಮತ್ತೆ ಕೆಲವು ನೇರವಾಗಿ ಓಟಿಟಿ ಮೂಲಕ ಪ್ರೇಕ್ಷಕರ ಎದುರಿಗೆ ಬರುತ್ತಿವೆ. ಆ ಪೈಕಿ ಬಹು ನಿರೀಕ್ಷಿತ ವಿದ್ಯಾ ಬಾಲನ್​ ಮುಖ್ಯಭೂಮಿಕೆ ನಿಭಾಯಿಸಿರುವ ‘ಶಕುಂತಲಾ ದೇವಿ‘ ಸಿನಿಮಾ ಅಮೆಜಾನ್​ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಆದರೆ, ಯಾವಾಗ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಆ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಿದೆ.

ಜುಲೈ 31ಕ್ಕೆ ಅಮೆಜಾನ್​ ಪ್ರೈಂನಲ್ಲಿ ಶಕುಂತಲಾ ದೇವಿ ಸಿನಿಮಾ ಬಿಡುಗಡೆಯಾಗಲಿದೆ. ಅಂದಹಾಗೆ ಮ್ಯಾಥಮಿಟಿಷಿಯನ್​ ಶಕುಂತಲಾ ದೇವಿ ಅವರ ಜೀವನವನ್ನೇ ನಿರ್ದೇಶಕ ಅನು ಮೆನನ್​ ತೆರೆಮೇಲೆ ತಂದಿದ್ದು, ಸಾನ್ಯಾ ಮಲ್ಹೋತ್ರಾ ಶಕುಂತಲಾ ದೇವಿ ಪುತ್ರಿಯ ಪಾತ್ರ ನಿಭಾಯಿಸಿದ್ದಾರೆ. ಇನ್ನುಳಿದಂತೆ ಜಿಶ್ನು ಸೇನ್​ಗುಪ್ತ, ಅಮಿತ್​ ಸಾದ್​ ಮುಖ್ಯಭೂಮಿಕೆಯಲ್ಲಿದ್ದಾರೆ.

ಇನ್ನು ಅದೇ ರೀತಿ ಸುಶಾಂತ್​ ಸಿಂಗ್​ ನಾಯಕತ್ವದ ಕೊನೇ ಸಿನಿಮಾ ದಿಲ್​ ಬೇಚಾರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಜುಲೈ 7ಕ್ಕೆ ಈ ಸಿನಿಮಾ ಸ್ಟಾರ್ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಲಿದೆ ಎಂದು ನಿರ್ದೇಶಕ ಮುಖೇಶ್​ ಛಾಬ್ರಾ ಚಿತ್ರದ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net