

‘ಸ್ತ್ರೀ ಪ್ರಧಾನ ಚಿತ್ರದಲ್ಲಿ ಒಂದೊಳ್ಳೇ ಕಥೆ ಇದ್ದರೆ ಅಕ್ಷಯ್ ಕುಮಾರ್ ಹಾಗೂ ಖಾನ್ತ್ರಯರ ಸಿನಿಮಾಗಳನ್ನೂ ಮೀರಿಸಿ ನೂರಾರು ಕೋಟಿ ಕಲೆಕ್ಷನ್ ಮಾಡಬಹುದು’
- ಹೀಗೆ ಹೇಳಿಕೊಂಡಿದ್ದು, ಬಾಲಿವುಡ್ ನಟಿ ವಿದ್ಯಾ ಬಾಲನ್. ಹೌದು, ಬಾಲಿವುಡ್ ನಟಿ ವಿದ್ಯಾ ಬಾಲನ್ ಖುಷಿಯ ಅಲೆಯಲ್ಲಿದ್ದಾರೆ.
ಆ ಖುಷಿಗೆ ಕಾರಣ ‘ಮಿಷನ್ ಮಂಗಲ್’!
ಕಳೆದ ಆಗಸ್ಟ್ 15ಕ್ಕೆ ಬಿಡುಗಡೆ ಆಗಿದ್ದ ಈ ಸಿನಿಮಾ ಇತ್ತೀಚೆಗಷ್ಟೇ ಹಾಂಗ್ಕಾಂಗ್ನಲ್ಲೂ ಅಲ್ಲಿನ ಭಾಷೆಗೆ ಡಬ್ ಆಗಿ ಬಿಡುಗಡೆ ಆಗಿತ್ತು. ಒಳ್ಳೆಯ ಪ್ರತಿಕ್ರಿಯೆ ಜತೆಗೆ ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಸದ್ದು ಮಾಡುತ್ತಿದೆ. ಚಿತ್ರದ ಫಲಿತಾಂಶ ಕಂಡ ವಿದ್ಯಾ, ‘ಮಹಿಳಾ ಪ್ರಧಾನ ಸಿನಿಮಾಗಳಿಗೂ 200, 500 ಕೋಟಿ ರೂ. ಕ್ಲಬ್ಗೆ ಸೇರ್ಪಡೆಗೊಳ್ಳುವ ತಾಕತ್ತಿದೆ. ಗಟ್ಟಿ ಕಂಟೆಂಟ್ ಕೊಟ್ಟರೆ, ಎಲ್ಲರಿಗೂ ಸಿನಿಮಾ ಇಷ್ಟವಾಗಲಿದೆ’ ಎಂದಿದ್ದಾರೆ.
‘ಮಿಷನ್ ಮಂಗಲ್ ಸಿನಿಮಾ ಗೆಲ್ಲಲು ಅಕ್ಷಯ್ ಕುಮಾರ್ ಪಾತ್ರ ಬಹುಮುಖ್ಯವಾದದ್ದು. ಅವರನ್ನೇ ಇಡೀ ಸಿನಿಮಾ ಮುಖವಾಣಿಯನ್ನಾಗಿಸಿತ್ತು. ಆದರೆ, ಇನ್ನು ಕೆಲ ದಿನಗಳಲ್ಲಿ ಇದೆಲ್ಲ ಬದಲಾಗಲಿದೆ. ಅಕ್ಷಯ್ ಕುಮಾರ್ ಇಲ್ಲದೆಯೂ ನಮ್ಮ ಸಿನಿಮಾಗಳು 200 ಕೋಟಿ ರೂ, 500 ಕೋಟಿ ರೂ. ಕ್ಲಬ್ಗೆ ಸೇರ್ಪಡೆಗೊಳ್ಳುವ ಕಾಲ ಹತ್ತಿರದಲ್ಲಿದೆ’ ಎಂದಿದ್ದಾರೆ.
ಸದ್ಯ ಕರ್ನಾಟಕ ಮೂಲದ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ಶಕುಂತಲಾ ದೇವಿ ಬಯೋಪಿಕ್ನಲ್ಲಿ ವಿದ್ಯಾ ನಟಿಸುತ್ತಿದ್ದಾರೆ. (ಏಜೆನ್ಸೀಸ್)