ಬಾಲಿವುಡ್​ ಹಿರಿಯ ನಟ ರಿಷಿ ಕಪೂರ್​ ಇನ್ನಿಲ್ಲ; ಎಡಬಿಡದೆ ಕಾಡುತ್ತಿತ್ತು ಕ್ಯಾನ್ಸರ್ ಮಹಾಮಾರಿ..

Rishi Kapoor 30 April 20
Published on

ಮುಂಬೈ: ಬಾಲಿವುಡ್ ನಟ ರಣಬೀರ್​ ಕಪೂರ್​ ಅವರ ತಂದೆ, ಹಿರಿಯ ನಟ ರಿಷಿ ಕಪೂರ್ (67)​ ಇಂದು ಮೃತಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಕ್ಯಾನ್ಸರ್​ನಿಂದ ಬಳಲುತ್ತಿದ್ದರು.

ಅಮೆರಿಕದಲ್ಲಿ ಸುಮಾರು 1 ವರ್ಷಗಳ ಕಾಲ ಚಿಕಿತ್ಸೆ ಪಡೆದಿದ್ದ ರಿಷಿ ಕಪೂರ್​, ಕಳೆದ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ವಾಪಸ್​ ಆಗಿದ್ದರು. ಮುಂಬೈನ ತಮ್ಮ ನಿವಾಸದಲ್ಲಿ ವಾಸವಾಗಿದ್ದ ಅವರ ಆರೋಗ್ಯದಲ್ಲಿ ನಿನ್ನೆ (ಏ.29) ಏರುಪೇರಾಗಿತ್ತು. ಉಸಿರಾಟದಲ್ಲಿ ತೀವ್ರ ಸಮಸ್ಯೆಯುಂಟಾಗಿದ್ದರಿಂದ ನಗರದ ಎಚ್​.ಎನ್​. ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net