

ಬೆಂಗಳೂರು: ಹಿರಿಯ ನಟಿ ಭವ್ಯಾ ಇದೀಗ ತಮ್ಮ ಸುದೀರ್ಘ ಕಲಾಜೀವನದ ಅನುಭವವನ್ನು ಕಿರಿಯರಿಗೆ ತಲುಪಿಸಲು ಮುಂದಾಗಿದ್ದಾರೆ. ಅದಕ್ಕೆಂದೇ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಪ್ರೖೆ.ಲಿ.’ ಸಂಸ್ಥೆಯ ಪ್ರಾಂಶುಪಾಲರಾಗಿ ಅವರು ಇತ್ತೀಚೆಗೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ನಟಿ ಭವ್ಯಾ, ಈ ಸಂಸ್ಥೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದೇ ನನ್ನ ಗುರಿ. ಇದಕ್ಕಾಗಿ ಎಲ್ಲರ ಪ್ರೋತ್ಸಾಹ ಬೇಕೆಂದು ಕೋರಿದರು. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಏಳು ಮಂದಿಗೆ ಇದೇ ವೇಳೆ ಸಾಧಕರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಾದ ಅಭಿನಯ, ಸುಚೇಂದ್ರ ಪ್ರಸಾದ್, ಅಭಿಜಿತ್, ಸಾರಿಕಾ ರಾಜೇ ಅರಸ್ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಫ್ಲೆಮಿಂಗೋ ಕ್ಯಾಲೆಂಡರ್ ಬಿಡುಗಡೆ ಕೂಡ ನಡೆಯಿತು. ಧವನ್ ಸೋಹಾ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಂಸ್ಥೆ ನಟನೆ, ನಿರ್ದೇಶನ, ಮತ್ತು ನಿರೂಪಣೆ ತರಬೇತಿ ನೀಡುತ್ತಿದೆ. ಜಾಹೀರಾತು, ಮಾಡೆಲಿಂಗ್ ಸ್ಪರ್ಧೆ, ಡ್ಯಾನ್ಸ್ ಅಕಾಡೆಮಿ, ಇವೆಂಟ್ ಮ್ಯಾನೇಜ್ವೆುಂಟ್ ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಯಲ್ಲಿ ತರಬೇತಿ ಪಡೆದವರಿಗೆ ಕಿರುತೆರೆ-ಹಿರಿತೆರೆಯಲ್ಲಿ ಅವಕಾಶಗಳು ಲಭಿಸಿವೆ.