ಮಣಿರತ್ನಂ ನಿರ್ದೇಶನದ 'ಇಂಜಿ ವೆಲ್ಲಂ'ನಲ್ಲಿ ಚೈತ್ರಾ ಜೆ ಆಚಾರ್​​

ಮಣಿರತ್ನಂ ಆಕ್ಷನ್ ಕಟ್ ಹೇಳಿರುವ 'ಇಂಜಿ ವೆಲ್ಲಂ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜನವರಿ 29ರಂದು ರಿಲೀಸ್ ಆಗಲಿದ್ದು, ಸಿನಿಮಾದ ಪೋಸ್ಟರ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ಕನ್ನಡದ ನಟಿ ಚೈತ್ರಾ ಜೆ ಆಚಾರ್ ನಟಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. 'ಮಣಿರತ್ನಂ ಸರ್ ಅವರ ಸಿನಿಮಾದಲ್ಲಿ ನನ್ನನ್ನು ನಾನು ನೋಡಲು ಮಗುವಿನಂತೆ ಕಾತುರತೆಯಿಂದ ಕಾಯುತ್ತಿದ್ದೇನೆ. ನಿರ್ದೇಶಕರೇ ಕರೆ ಮಾಡಿ ಒಂದು ಪಾತ್ರವಿದೆ, ಮತ್ತು ನೀವು ಅದನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದಾಗ ನಾನು ಇನ್ನೇನು ಕೇಳಲು ಸಾಧ್ಯ?' ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚೈತ್ರಾ ಜೆ ಆಚಾರ್ ಸಾಕಷ್ಟು ಸಂತೋಷ ವ್ಯಕ್ತಪಡಿಸಿದ್ದರು. ಸದ್ಯ ಸಿನಿಮಾ ರಿಲೀಸ್ ಡೇಟ್ ಪೋಸ್ಟರ್​ಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾದಲ್ಲಿ ನಾನು ಸಹ ನಟಿಸಿದ್ದೇನೆ ಎನ್ನುವುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ಮಣಿರತ್ನಂ ನಿರ್ದೇಶನದ 'ಇಂಜಿ ವೆಲ್ಲಂ'ನಲ್ಲಿ ಚೈತ್ರಾ ಜೆ ಆಚಾರ್​​