1992ರ ಷೇರು ಮಾರುಕಟ್ಟೆ ಹಗರಣವನ್ನೇ ತಮ್ಮ ಚಿತ್ರದ ಕಥೆಯ ಜೀವಾಳ ಮಾಡಿಕೊಂಡ ವೆಂಕಿ, ಅದರ ಸುತ್ತವೇ ವಿಶಿಷ್ಟ ಸ್ಟೋರಿ ಕಟ್ಟಿ, ದುಲ್ಕರ್ ಸಲ್ಮಾನ್ ಅವರ ಕ್ಲಾಸಿಕ್ ಅಭಿನಯದಿಂದ ಭರ್ಜರಿ ಯಶಸ್ಸನ್ನು ಕಂಡರು. ಚಿತ್ರಮಂದಿರಗಳಲ್ಲಿ ಮಾತ್ರ ವಿಶೇಷ ಮನ್ನಣೆ ಗಳಿಸಿದ ಚಿತ್ರವು, ಒಟಿಟಿಯಲ್ಲಿಯೂ ಅತ್ಯಂತ ಜನಪ್ರಿಯ ಮತ್ತು ಮೆಚ್ಚುಗೆಗಳನ್ನು ಸ್ವೀಕರಿಸಿತು. ಮೊದಲಿನಿಂದಲೂ ಈ ಸಿನಿಮಾದ ಸೀಕ್ವೆಲ್ ಬರುವ ಬಗ್ಗೆ ಕುತೂಹಲ ಹೊಂದಿದ್ದ ಅಭಿಮಾನಿಗಳಿಗೆ ನಿರ್ದೇಶಕರ ಇತ್ತೀಚಿನ ಹೇಳಿಕೆ ಖುಷಿಗಿಂತ ಬೇಸರವನ್ನೇ ತಂದೊಡ್ಡಿದೆ.