ಬೆಂಗಳೂರು: ಮಾಜಿ ಕೇಂದ್ರ ಸಚಿವ, ದಿವಂಗತ ಅನಂತ್ ಕುಮಾರ್ ಅವರು ತಮ್ಮ ತಾಯಿ ಗಿರಿಜಾಶಾಸ್ತ್ರಿಯವರ ಸ್ಮರಣಾರ್ಥ ಸ್ಥಾಪಿಸಿರುವ ಅದಮ್ಯ ಚೇತನ ಸಂಸ್ಥೆಗೆ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಿದರು.
ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ವೆಂಕಯ್ಯ ನಾಯ್ಡು ಅದಮ್ಯ ಚೇತನ ಸಂಸ್ಥೆಗೆ ತೆರಳಿ ಅಲ್ಲಿನ ಶೂನ್ಯ ತ್ಯಾಜ್ಯ ಅಡುಗೆ ಮನೆಯನ್ನು ವೀಕ್ಷಿಸಿದರು.
ಅನ್ನ-ಅಕ್ಷರ-ಆರೋಗ್ಯ ಎಂಬ ಮೂರು ಮುಖ್ಯ ಆಶಯಗಳನ್ನಿಟ್ಟುಕೊಂಡು ಹುಟ್ಟಿದ ಈ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರು ನಿಭಾಯಿಸುತ್ತಿದ್ದಾರೆ. ಹಸಿರು ಭಾನುವಾರದಂತಹ ಕಾರ್ಯಕ್ರಮಗಳ ಮೂಲಕ ಗಿಡಗಳನ್ನು ನೆಟ್ಟಿ, ಬೆಳೆಸುತ್ತ ಪರಿಸರ ರಕ್ಷಣಾ ಕಾರ್ಯದಲ್ಲೂ ಅದಮ್ಯ ಚೇತನ ಸಂಪೂರ್ಣ ತೊಡಗಿಸಿಕೊಂಡಿದೆ.
ಅದಮ್ಯ ಚೇತನದ ಅನ್ನಪೂರ್ಣ ಯೋಜನೆಯಡಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಪಡೆಯುತ್ತಿದ್ದಾರೆ. ಒಂದು ವಿಭಿನ್ನತೆ ಎಂದರೆ ಅದಮ್ಯ ಚೇತನದ ಅಡುಗೆ ಮನೆಯಲ್ಲಿ ಜೈವಿಕ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತದೆ. ಹಾಗಾಗೇ ಇದಕ್ಕೆ ಶೂನ್ಯ ತ್ಯಾಜ್ಯ ಅಡುಗೆ ಮನೆ ಎನ್ನಲಾಗುತ್ತದೆ.
ಇಂದು ಭೇಟಿ ನೀಡಿದ ವೆಂಕಯ್ಯ ನಾಯ್ಡು ಅವರಿಗೆ ತೇಜಸ್ವಿನಿ ಅನಂತ್ ಕುಮಾರ್ ಅವರು ಅದಮ್ಯ ಚೇತನ ಅಡುಗೆ ಮನೆಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ವಿಧಾನಗಳನ್ನು ವಿವರಿಸಿದರು. ತಮ್ಮ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.