ಸದ್ದಿಲ್ಲದೆ ನಡೆಯಿತಾ ವಸಿಷ್ಠ, ಹರಿಪ್ರಿಯಾ ನಿಶ್ಚಿತಾರ್ಥ? ಸ್ಯಾಂಡಲ್​ವುಡ್​ನಲ್ಲಿ ಹೀಗೊಂದು ಸುದ್ದಿ …

Vasishta Simha - Haripriya
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಹೊಸ ಲವ್​ಬರ್ಡ್ಸ್​ ಆಗಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ನಿಶ್ಚಿತಾರ್ಥ ಇಂದು ಗುಟ್ಟಾಗಿ ನಡೆದಿರುವ ಸುದ್ದಿ ಇದೆ. ಈ ನಿಶ್ಚಿತಾರ್ಥದಲ್ಲಿ ಎರಡೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗಿದದ್ದು, ಅವರಿಬ್ಬರ ಆಪ್ತರಿಗೂ ಈ ವಿಷಯ ಗೊತ್ತಾಗಿಲ್ಲ ಎಂದು ಹೇಳಲಾಗುತ್ತಿದೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿಸುತ್ತಿದ್ದಾರೆ ಮತ್ತು ಸದ್ಯದಲ್ಲೇ ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಈ ಸುದ್ದಿಯನ್ನು ಇಬ್ಬರೂ ಕನ್ಫರ್ಮ್​ ಮಾಡಿಲ್ಲ. ಅವರನ್ನು ಸಂಪರ್ಕಿಸುವುಕ್ಕೆ ಪ್ರಯತ್ನಿಸಿದರೂ, ಅವರು ಮಾಧ್ಯಮದವರ ಕರೆಗಳೆನ್ನು ಸ್ವೀಕರಿಸುತ್ತಲೇ ಇಲ್ಲ.

ಇದರ ನಡುವೆಯೇ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕೆಲವು ದಿನಗಳ ಹಿಂದೆ ದುಬೈಗೆ ಹಾರಿದ್ದರು. ಇಬ್ಬರೂ ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಕೈಕೈ ಹಿಡಿದು ನಡೆಯುತ್ತಿರುವ ಫೋಟೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ದುಬೈನಿಂದಲೂ ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ಹಲವು ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಗಳ ಮೂಲಕ ಹಂಚಿಕೊಂಡಿದ್ದರು.

ಇದೀಗ ದುಬೈನಿಂದ ವಾಪಸ್ಸಾಗಿರುವ ವಸಿಷ್ಠ ಮತ್ತು ಹರಿಪ್ರಿಯಾ ಸದ್ದಿಲ್ಲದೆ ಶುಕ್ರವಾರ ಎಂಗೇಜ್​ಮೆಂಟ್​ ಆಗಿದ್ದಾರೆ ಎಂಬ ಸುದ್ದಿ ಇದೆ. ಹರಿಪ್ರಿಯಾ ಅವರ ಬೆಂಗಳೂರಿನ ನಿವಾಸದಲ್ಲೇ ಈ ನಿಶ್ಚಿತಾರ್ಥ ನಡೆದಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net