ವರುಣ್-ನತಾಶಾ ಕಲ್ಯಾಣ

Varun
Published on

ಬಾಲಿವುಡ್ ನಟ ವರುಣ್ ಧವನ್ ಬಹುಕಾಲದ ಗೆಳತಿ ನತಾಶಾ ದಲಾಲ್ ಅವರನ್ನು ವರಿಸಿದ್ದಾರೆ. ಭಾನುವಾರ ಸಂಜೆ ಮುಂಬೈನ ಅಲಿಬಾಗ್ ನಲ್ಲಿರುವ ಮ್ಯಾನ್ಷನ್ ಹೌಸ್​ನಲ್ಲಿ ಅದ್ದೂರಿ ವಿವಾಹ ಕಾರ್ಯಕ್ರಮ ನಡೆದಿದೆ.

ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಜನರಿಗಷ್ಟೇ ಆಹ್ವಾನವಿದ್ದು, ವರುಣ್ ಧವನ್ ಮತ್ತು ನತಾಶಾ ಕುಟುಂಬಸ್ಥರು ಮತ್ತು ಚಿತ್ರರಂಗದ ಕರಣ್ ಜೋಹರ್ ಸೇರಿ ಕೆಲವೇ ಕೆಲವು ಬೆರಳೆಣಿಕೆ ಸ್ನೇಹಿತರು ಸೇರಿ 50 ಜನರ ಸಮ್ಮುಖದಲ್ಲಿ ವಿವಾಹ ಕಾರ್ಯ ನಡೆದಿದೆ.

ಇನ್ನು ಇದಾದ ಬಳಿಕ ಸಿನಿಮಾರಂಗದ ಸ್ನೇಹಿತರಿಗೆಂದೇ ಫೆಬ್ರವರಿ 2ರಂದು ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷದ ಮೇ ತಿಂಗಳಲ್ಲಿಯೇ ಈ ಜೋಡಿ ಸಪ್ತಪದಿ ತುಳಿಯಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net